alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ಪುತ್ರಿ ಎಂದು ಹೇಳಿಕೊಳ್ಳುತ್ತಿರುವ ಯುವತಿಗೆ DNA ಪರೀಕ್ಷೆ…?

ಅಮೃತಾ ಸಾರಥಿ ಎಂಬ ಮಹಿಳೆ ತಾನು ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪುತ್ರಿ ಅಂತಾ ಹೇಳಿಕೊಂಡಿದ್ದಳು. ತಾನು ಜಯಾ ಪುತ್ರಿ ಅನ್ನೋದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆಗೆ ಅವಕಾಶ ಕೊಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು.

ಇಂದು ಹೈದ್ರಾಬಾದ್ ನಲ್ಲಿ ಆಕೆಗೆ ಡಿಎನ್ಎ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಅಮೃತಾಳ ಅರ್ಜಿಯನ್ನು ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ಗೆ ವರ್ಗಾಯಿಸಿತ್ತು. ನ್ಯಾಯಾಲಯ ಸಮ್ಮತಿಸಿದಲ್ಲಿ ಇಂದು ಅಮೃತಾಗೆ ಡಿಎನ್ಎ ಪರೀಕ್ಷೆ ಮಾಡಲಾಗುತ್ತದೆ.

ಅಮೃತಾಳ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಡಿಎನ್ಎ ಪರೀಕ್ಷೆ ಬಗ್ಗೆ ತಮಿಳುನಾಡು ಸರ್ಕಾರ ಮತ್ತು ಚೆನ್ನೈ ಮುನ್ಸಿಪಲ್ ಕಾರ್ಪೊರೇಶನ್ ನಿಂದ ಪ್ರತಿಕ್ರಿಯೆ ಕೇಳಿತ್ತು. ಈ ಮಧ್ಯೆ ಅಮೃತಾ, ಹೈದ್ರಾಬಾದ್ ನ ಡಿಎನ್ಎ ತಜ್ಞರನ್ನು ಭೇಟಿ ಮಾಡಿದ್ದಾಳೆ. ಸಿಸಿಎಂಬಿ ಹೈದ್ರಾಬಾದ್ ನಲ್ಲಿ ತನಗೆ Y-STR ಪರೀಕ್ಷೆ ಮಾಡುವಂತೆ ಕೇಳಿದ್ದಾಳೆ.

ಕೋರ್ಟ್ ಸಮ್ಮತಿಸಿದಲ್ಲಿ ಅಮೃತಾಳ ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತದೆ. ಈ ಪರೀಕ್ಷೆಯ ವರದಿ ಬರಲು ಸುಮಾರು 2 ತಿಂಗಳುಗಳೇ ಬೇಕು ಅಂತಾ ಹೇಳಲಾಗ್ತಿದೆ. 1980ರ ಆಗಸ್ಟ್ 14ರಂದು ಚೆನ್ನೈನಲ್ಲಿ ತಾನು ಜನಿಸಿದ್ದು, ಜಯಲಲಿತಾ ಪುತ್ರಿ ಅನ್ನೋದನ್ನು ಗುಟ್ಟಾಗಿ ಇಡಲಾಗಿತ್ತು ಅಂತಾ ಅಮೃತಾ ಸಾರಥಿ ಹೇಳಿಕೊಂಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...