alex Certify
ಕನ್ನಡ ದುನಿಯಾ       Mobile App
       

Kannada Duniya

ಭಕ್ತಿ ಪ್ರದರ್ಶಿಸಲು ನಾಲಿಗೆಯನ್ನೇ ಕತ್ತರಿಸಿಕೊಂಡಳು ಮಹಿಳೆ…!

ನಮ್ಮ ದೇಶದಲ್ಲಿ ಜನರಿಗೆ ದೇವರ ಮೇಲೆ ಭಕ್ತಿ ಅಪಾರ. ಭಕ್ತಿಯ ಪರಾಕಾಷ್ಠೆಯಲ್ಲಿ ದೈಹಿಕ ಹಿಂಸೆಯೂ ಕೆಲವೊಂದು ಕಡೆಗಳಲ್ಲಿ ಸಾಮೂಹಿಕವಾಗಿ ನಡೆಯುತ್ತೆ. ಆದರೆ ಇಲ್ಲೊಬ್ಬಳು ಮಹಿಳೆ ದೇವರಿಗೆ ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡು ಅರ್ಪಣೆ ಮಾಡಿದ್ದಾಳೆ.

ಇದನ್ನು ಮೌಢ್ಯ ಎನ್ನಬೇಕೋ ಅಥವಾ ಭಕ್ತಿಯ ಪರಾಕಾಷ್ಠೆ ಎನ್ನಬೇಕೋ ಗೊತ್ತಿಲ್ಲ. ಮಧ್ಯಪ್ರದೇಶದ ತರ್ಸಮಾ ಎಂಬ ಹಳ್ಳಿಯಲ್ಲಿ ದೇವಿ ದುರ್ಗೆಯ ಭಕ್ತೆಯಾಗಿದ್ದ 45 ವರ್ಷದ ಗುಡ್ಡಿ ತೋಮರ್ ಎಂಬಾಕೆ ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿದ್ದಾಳೆ. ನಂತರ ಅದನ್ನು ಬಿಜಸೇನ ಮಾತಾ ದೇವಾಲಯಕ್ಕೆ ಅರ್ಪಿಸಿದ್ದಾಳೆ.

ಇದಾದ ಬಳಿಕ ಪ್ರಜ್ಞೆ ತಪ್ಪಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ದೇವಿ ದುರ್ಗೆಯ ಭಕ್ತೆಯಾಗಿದ್ದು, ಮದುವೆಯಾದಾಗಿನಿಂದ ಪ್ರತಿದಿನವೂ ಬಿಜಸೇನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದಳು ಎಂಬುದಾಗಿ ಆಕೆಯ ಪತಿ ರವಿ ತೋಮರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...