alex Certify
ಕನ್ನಡ ದುನಿಯಾ       Mobile App
       

Kannada Duniya

12 ಹೆಣ್ಣು ಮಕ್ಕಳ ನಂತ್ರ ಗಂಡು ಮಗು ಜನನ

woman

ಹಿಂದೊಂದು ಕಾಲವಿತ್ತು. ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಆಗ ಅವಕಾಶವಿರಲಿಲ್ಲ. ಮದುವೆಯಾದಾಗಿನಿಂದ ಒಂದಾದ ಮೇಲೆ ಒಂದರಂತೆ ಮಕ್ಕಳಿಗೆ ಜನ್ಮ ನೀಡುವುದೇ ಮಹಿಳೆಯಾದವಳ ಕೆಲಸವಾಗಿತ್ತು.

ಕಾಲ ಬದಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಆವಿಷ್ಕಾರವಾಗಿದೆ. ಆದ್ರೆ ಅನೇಕ ಜನರು ಇನ್ನೂ ಬುದ್ದಿ ಕಲಿತಿಲ್ಲ. ಜನನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಗಂಡು ಮಗುವಿಗಾಗಿ ಹೆಣ್ಣನ್ನು ಹೆರುತ್ತಲೇ ಇದ್ದಾರೆ. ಇದಕ್ಕೆ ಉತ್ತರ ಪ್ರದೇಶ ಉತ್ತಮ ಉದಾಹರಣೆ.

ಉತ್ತರ ಪ್ರದೇಶದ ಫರೂಕಾಬಾದ್ ನ ಮಹಿಳೆ ರೇಖಾ, ಗಂಡು ಮಗು ಬೇಕೆನ್ನುವ ಕಾರಣಕ್ಕೆ 12 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. 13 ನೇ ಮಗು ಗಂಡಾಗಿದ್ದು,ವಂಶೋದ್ಧಾರಕ ಬಂದ ಎಂಬ ಖುಷಿಯಲ್ಲಿದ್ದಾಳೆ ಮಹಾತಾಯಿ. 13 ನೇ ಮಗುವಿಗೆ  ನಿಲೇಶ್ ಎಂದು ಹೆಸರಿಡಲಾಗಿದೆ.

ರೇಖಾ ಪತಿಗೆ ಎರಡೂವರೆ ಎಕರೆ ಜಮೀನಿದೆ. ಬೇರೆಯವರ ಜಮೀನನ್ನು ಪಡೆದು ಕೆಲಸ ಮಾಡ್ತಿರುವ ರೇಖಾ ಪತಿ, ಕುಟುಂಬದವರ ಹೊಟ್ಟೆ ತುಂಬಿಸುತ್ತಿದ್ದಾನೆ. ಮೂವರು ಹೆಣ್ಣು ಮಕ್ಕಳ ಮದುವೆಯಾಗಿದೆ. ನಾಲ್ಕು ಹೆಣ್ಣು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...