alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿ ಮಹಿಳೆಯನ್ನು ಡೋಲಿಯಲ್ಲಿ ಹೊತ್ತೊಯ್ದ ವಿಡಿಯೋ ವೈರಲ್

ಹೈದರಾಬಾದ್: ಗ್ರಾಮದಿಂದ ಪಟ್ಟಣಕ್ಕೆ ಸಮರ್ಪಕ ರಸ್ತೆ, ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ ಗರ್ಭಿಣಿಯನ್ನು ಬಿದಿರಿನ ಕೋಲು ಮತ್ತು ಬಟ್ಟೆಯಿಂದ ತಯಾರಿಸಿದ ತಾತ್ಕಾಲಿಕ ಡೋಲಿಯಲ್ಲಿ ಸಾಗಿಸಿದ ಘಟನೆ ಆಂಧ್ರಪ್ರದೇಶದ ವಿಝಯಾನಗರಮ್ ಜಿಲ್ಲೆಯಲ್ಲಿ ನಡೆದಿದೆ.

ತುಂಬು ಗರ್ಭಿಣಿಯಾಗಿದ್ದ ಸಾಲೂರಿನ ಬುಡಕಟ್ಟು ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸುಮಾರು 6-7 ಕಿ.ಮೀ. ದೂರ ಇರುವ ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿತ್ತು. ರಸ್ತೆಯೇ ಇಲ್ಲದ ಈ ಊರಿಗೆ ಆಂಬುಲೆನ್ಸ್, ವಾಹನ ಬರುವುದು ದೂರದ ಮಾತು.

ಹೀಗಾಗಿ ಗರ್ಭಿಣಿ ಮಹಿಳೆಯನ್ನು ಆಕೆಯ ಕುಟುಂಬದ ಇಬ್ಬರು ಪುರುಷರು ಅನಿವಾರ್ಯವಾಗಿ ಈ ತಾತ್ಕಾಲಿಕ ಡೋಲಿಯಲ್ಲಿ ಹೊತ್ತುಕೊಂಡು ಹೊರಟಿದ್ದರು. ಆದರೆ 3 ಕಿ.ಮೀ. ಸಾಗುವಷ್ಟರಲ್ಲೇ ಮುತ್ತಮ್ಮಗೆ ಹೆರಿಗೆ ನೋವು ಹೆಚ್ಚಾಗಿ ದಾರಿ ಮಧ್ಯೆಯೇ ಹೆರಿಗೆಯಾಗಿದ್ದು, ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ.

ಆಕೆಯನ್ನು ಅಸುರಕ್ಷಿತ ಮಾರ್ಗದಲ್ಲಿ ಹೊತ್ತೊಯ್ಯುತ್ತಿರುವ ವಿಡಿಯೋ ಇದೀಗ ವೈರಲ್ ಕೂಡ ಆಗಿದ್ದು, ಜನಪ್ರತಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯ ದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಹತ್ತಿರದ ಪಟ್ಟಣಕ್ಕೆ ಸಂಪರ್ಕ ಕಷ್ಟವಾಗುತ್ತಿದ್ದು, ಇಲ್ಲಿ ರಸ್ತೆ ಮಾಡಿಕೊಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರು. ಜೂನ್ ನಲ್ಲಷ್ಟೇ ಇಂತದ್ದೇ ಘಟನೆ ನಡೆದಿದ್ದರೂ ಎಚ್ಚೆತ್ತುಕೊಂಡಿರಲಿಲ್ಲ. ಇದೀಗ ಸಾರ್ವಜನಿಕರು ಚೆನ್ನಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...