alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತೆಯ ಮೇಲೆ ಮಹಿಳೆಯ ಸಜೀವ ದಹನ

burn

ಆಸ್ಪತ್ರೆಯ ಯಡವಟ್ಟಿನಿಂದಾಗಿ ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬಳ ಸಜೀವ ದಹನವಾಗಿದೆ. ಅಂತ್ಯಸಂಸ್ಕಾರಕ್ಕಾಗಿ ಚಿತೆಯ ಮೇಲೆ ಮಲಗಿಸಿದಾಗ ಮಹಿಳೆ ಉಸಿರಾಡುತ್ತಿದ್ಲು ಅಂತಾ ಆಕೆಯ ಸಂಬಂಧಿಕರು ಆರೋಪಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯನ್ನು ಗ್ರೇಟರ್ ನೊಯ್ಡಾದ ಶಾರ್ದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ 11.45ರ ಸುಮಾರು ಮಹಿಳೆ ಮೃತಪಟ್ಟಿದ್ದಾಳೆಂದು ಆಸ್ಪತ್ರೆಯ ವೈದ್ಯರು ಪ್ರಕಟಿಸಿದ್ದಾರೆ. ಬೆಳಗಿನ ಜಾವ 1.27ರ ವೇಳೆಗೆ ಶವವನ್ನು ಪತಿಗೆ ಹಸ್ತಾಂತರ ಮಾಡಲಾಗಿದೆ.

ಮೃತದೇಹವನ್ನು ಅಲಿಘಡಕ್ಕೆ ತಂದ ಆತ ಬೆಳಗ್ಗೆ 8 ಗಂಟೆ ವೇಳೆಗೆ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ. ಮಹಿಳೆಯ ಸಹೋದರ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ಅಂತ್ಯಸಂಸ್ಕಾರದ ಸ್ಥಳಕ್ಕೆ ಬಂದಿದ್ರು. ಶೇ.70ರಷ್ಟು ಸುಟ್ಟಿದ್ದ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಯ್ತು.

ಮಹಿಳೆಯ ಸಾವು ಶ್ವಾಸಕೋಶ ಸೋಂಕಿನಿಂದ ಸಂಭವಿಸಿಲ್ಲ. ಸಜೀವ ದಹನದಿಂದಾದ ಆಘಾತದಿಂದ ಸಂಭವಿಸಿದೆ ಅಂತಾ ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ ಅಂತಾ ಅವಳ ಪತಿ ಮತ್ತು ಕುಟುಂಬದ 10 ಸದಸ್ಯರ ವಿರುದ್ಧ ಸಂಬಂಧಿಕರು ದೂರು ದಾಖಲಿಸಿದ್ದಾರೆ.

ಆರೋಪಿಗಳೆಲ್ಲ ತಲೆಮರೆಸಿಕೊಂಡಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಆದ್ರೆ ಶಾರ್ದಾ ಆಸ್ಪತ್ರೆಯ ವೈದ್ಯರು ಮಾತ್ರ ಮಹಿಳೆಯ ಸಾವು ಶ್ವಾಸಕೋಶ ಸೋಂಕಿನಿಂದ್ಲೇ ಸಂಭವಿಸಿದೆ ಅಂತಾ ವಾದಿಸಿದ್ದಾರೆ. 21 ವರ್ಷದ ಈ ಮಹಿಳೆ 2 ವರ್ಷದ ಹಿಂದೆ ಮನೆಬಿಟ್ಟು ಬಂದು ಪ್ರೇಮ ವಿವಾಹವಾಗಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...