alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ

ತಾಯಿಯಾದವಳು ತನ್ನ ಮಕ್ಕಳ ರಕ್ಷಣೆಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ ಎಂದು ಹೇಳಲಾಗುತ್ತದೆ ಅದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ.

ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಮುತ್ತುಲಕ್ಷ್ಮಿ ಎಂಬಾಕೆ ಶುಕ್ರವಾರ ರಾತ್ರಿ ತನ್ನ 11 ವರ್ಷದ ಮಗಳೊಂದಿಗೆ ಕಟ್ಟಿಗೆ ತರಲೆಂದು ಕಾಡಿಗೆ ತೆರಳಿದ್ದಳು.

ವಾಪಾಸ್ ಬರುವಾಗ ಪೊದೆಯಲ್ಲಿ ಅಡಗಿದ್ದ ಚಿರತೆಯೊಂದು ಮುತ್ತುಲಕ್ಷ್ಮಿಯ ಪುತ್ರಿಯನ್ನು ಎಳೆದೊಯ್ಯಲು ಮುಂದಾಗಿದೆ. ಅಂತಹ ಸಂದರ್ಭದಲ್ಲೂ ಎದೆಗುಂದದ ಮುತ್ತುಲಕ್ಷ್ಮೀ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಚಿರತೆಗೆ ಬಲವಾಗಿ ಹೊಡೆದಿದ್ದು, ಆಕೆಯ ಹೊಡೆತಕ್ಕೆ ಕಂಗಾಲಾದ ಚಿರತೆ ಮಗುವನ್ನು ಬಿಟ್ಟು ಪರಾರಿಯಾಗಿದೆ.

ಅಲ್ಪಸ್ವಲ್ಪ ಗಾಯಗಳಾಗಿದ್ದ ತಾಯಿ, ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಭಾಗದಲ್ಲಿ ಕಳೆದ ಹತ್ತು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದ್ದು, ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...