alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಬ್ ಚಾಲಕ ಕೇಳಿದ ಪ್ರಶ್ನೆಗೆ ಕಂಗಾಲಾದ್ಲು ಯುವತಿ

ಕಛೇರಿಯಿಂದ ಮನೆಗೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದ ಯುವತಿಯೊಬ್ಬಳು ಕ್ಯಾಬ್ ಬರಲು ತಡವಾದಾಗ ಚಾಲಕನಿಗೆ ಕರೆ ಮಾಡಿದ ವೇಳೆ ಆತ ಕೇಳಿದ ಪ್ರಶ್ನೆಯಿಂದ ಆಘಾತಕ್ಕೊಳಗಾಗಿದ್ದಾಳೆ. ಬಳಿಕ ಕ್ಯಾಬ್ ಕ್ಯಾನ್ಸಲ್ ಮಾಡಿ ಆಟೋ ಏರಿ ಮನೆಗೆ ತೆರಳಿದ ಯುವತಿ ಕ್ಯಾಬ್ ಚಾಲಕನ ವಿರುದ್ದ ಉಬರ್ ಕಂಪನಿಗೆ ದೂರು ನೀಡಿದ್ದಾಳೆ.

ಇಂತದೊಂದು ಘಟನೆ ಪುಣೆಯಲ್ಲಿ ನಡೆದಿದ್ದು, ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಸೇನಾಪತಿ ಬಾಪಟ್ ರಸ್ತೆಯಿಂದ ತನ್ನ ಮನೆಗೆ ತೆರಳಲು ಈ ಯುವತಿ ಉಬರ್ ಕ್ಯಾಬ್ ಬುಕ್ ಮಾಡಿದ್ದಳು. 10 ನಿಮಿಷಗಳಾದರೂ ಕ್ಯಾಬ್ ಬಾರದ ಕಾರಣ ಯುವತಿ ಚಾಲಕನಿಗೆ ಕರೆ ಮಾಡಿದ್ದು, ಆತ ಕೆಲ ಹೊತ್ತಿನಲ್ಲೇ ಬರುವುದಾಗಿ ಹೇಳಿದ್ದಲ್ಲದೇ ನೈಟ್ ಪಾರ್ಸೆಲ್ ತರಬೇಕಾ ಎಂದು ಪ್ರಶ್ನಿಸಿದ್ದಾನೆ.

ಚಾಲಕನ ಪ್ರಶ್ನೆಯಿಂದ ಯುವತಿ ಗೊಂದಲಕ್ಕೊಳಗಾಗಿದ್ದು, ನೈಟ್ ಪಾರ್ಸೆಲ್ ಎಂದರೆ ಏನು ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಆತ ಮದ್ಯ ಎಂದು ಹೇಳಿದ್ದು, ಇದರಿಂದ ಯುವತಿಗೆ ಆಘಾತವಾಗಿದೆ. ಇಂತಹ ಚಾಲಕನ ಜೊತೆ ಪ್ರಯಾಣ ಮಾಡುವುದು ಸುರಕ್ಷಿತವಲ್ಲವೆಂಬ ನಿರ್ಧಾರಕ್ಕೆ ಬಂದ ಯುವತಿ ತನ್ನ ರೈಡ್ ಕ್ಯಾನ್ಸಲ್ ಮಾಡಿ ಆಟೋ ಏರಿ ಮನೆಗೆ ಹೋಗಿದ್ದಾಳೆ.

ಬಳಿಕ ಘಟನೆಯ ಸಂಪೂರ್ಣ ವಿವರವನ್ನು ಉಬರ್ ಕಂಪನಿಯ ಅಧಿಕಾರಿಗಳಿಗೆ ನೀಡಿದ್ದಳು. ಯುವತಿಯಿಂದ ದೂರು ಬರುತ್ತಿದ್ದಂತೆಯೇ ಚಾಲಕ ಬಾಲಾಜಿಯನ್ನು ತಕ್ಷಣದಿಂದಲೇ ಕಂಪನಿ ಸೇವೆಯಿಂದ ವಜಾ ಮಾಡಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ಯುವತಿ ಅಧಿಕೃತವಾಗಿ ದೂರು ದಾಖಲಿಸಿದರೆ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...