alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಿನಲ್ಲಿ 22 ಸಾವಿರಕ್ಕೆ ಹುಡುಗಿ ಖರೀದಿಸಿ ಮದುವೆ ಆದ….ಆದ್ರೆ…!

ಉತ್ತರ ಪ್ರದೇಶದ ಬಾಗ್ಪತ್ ನಲ್ಲಿ ಮಹಿಳೆಯರನ್ನು ಹರಾಜಿಗಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡ ಸಭೆಯಲ್ಲಿ ಮಹಿಳೆಗೆ ಹರಾಜು ಕೂಗಲಾಗಿದೆ. ನಿನ್ನೆ ಯುವಕನೊಬ್ಬ ಯುವತಿಯನ್ನು 22 ಸಾವಿರ ರೂಪಾಯಿಗೆ ಹರಾಜಿನಲ್ಲಿ ಖರೀದಿ ಮಾಡಿ ಮದುವೆಯಾಗಿದ್ದಾನೆ.

ಮದುವೆ ನಂತ್ರ ಹಣ ನೀಡದ ಕಾರಣ ಮಧ್ಯವರ್ತಿ ಹುಡುಗಿಯನ್ನು ಕರೆದೊಯ್ದಿದ್ದಾನೆ ಎನ್ನಲಾಗಿದೆ. ಇದ್ರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಈ ವೇಳೆ ಹರಾಜು ಪ್ರಕ್ರಿಯೆ ವಿಚಾರ ಹೊರ ಬಿದ್ದಿದೆ.

ನಾಲ್ಕು ದಿನಗಳ ಹಿಂದಷ್ಟೇ ಹರಾಜು ಪ್ರಕ್ರಿಯೆ ನಡೆದಿತ್ತು. ನಂತ್ರ ಯುವಕ ಹರಾಜಿನಲ್ಲಿ ಖರೀದಿ ಮಾಡಿದ್ದ ಯುವತಿಯನ್ನು ಮದುವೆಯಾಗಿದ್ದ. ಮಧ್ಯವರ್ತಿಗೆ ಯುವಕ 17 ಸಾವಿರ ರೂಪಾಯಿ ನೀಡಿದ್ದ. ಬಾಕಿ ಹಣವನ್ನು ಎರವಲು ಪಡೆದಿದ್ದ. ನಾಲ್ಕು ದಿನವಾದ್ರೂ ಹಣ ನೀಡದ ಹಿನ್ನೆಲೆಯಲ್ಲಿ ಮೃತ ಮುಖೇಶ್ ಪತ್ನಿಯನ್ನು ದಲ್ಲಾಳಿ ಕರೆದೊಯ್ದಿದ್ದ. ಮುಖೇಶ್ ಸಾವಿನ ನಂತ್ರ ಆತ್ಮಹತ್ಯೆಗೆ ಕಾರಣ ತಿಳಿದ ಪೊಲೀಸರು ದಂಗಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...