alex Certify
ಕನ್ನಡ ದುನಿಯಾ       Mobile App
       

Kannada Duniya

ಕೆರಳಿದ ಗೂಳಿ ತಿವಿತಕ್ಕೆ ಗಿರಿಗಿಟ್ಟಲೆಯಂತೆ ತಿರುಗಿ ಬಿದ್ದ ಮಹಿಳೆ

ಗುಜರಾತ್‌ ನ ಭರೂಚ್ ನಗರದಲ್ಲಿ ಕೆರಳಿದ ಗೂಳಿಯೊಂದು ಮಹಿಳೆ ಮೇರೆ ಎರಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.

ಪಟ್ಟಣದ ಮಾರುಕಟ್ಟೆಯ ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಗೆ ಹಿಂಬದಿಯಿಂದ ಓಡಿ ಬಂದ ಕಪ್ಪು ಬಣ್ಣದ ಗೂಳಿ ಎರಗಿದೆ. ಗೂಳಿ ಎತ್ತಿ ಒಗೆದ ಹೊಡೆತಕ್ಕೆ ಆ ಮಹಿಳೆ 360 ಡಿಗ್ರಿ ಗಾಳಿಯಲ್ಲಿ ಪಲ್ಟಿ ಹೊಡೆದು ಗಿರಿಗಿಟ್ಟಲೆಯಂತೆ ತಿರುಗಿ ಒಂದಷ್ಟು ದೂರ ಹೋಗಿ ಬಿದ್ದಿದ್ದಾರೆ. ಇಡೀ ಘಟನೆ ಸಮೀಪದ ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕಂಡ ಅಲ್ಲಿದ್ದ ಜನರೂ ಕಕ್ಕಾಬಿಕ್ಕಿಯಾಗಿ ಗಾಬರಿಗೊಂಡು ಓಡಿದ್ದಾರೆ. ಈ ಗೂಳಿ ಬಿಡಾಡಿಯೇ ಅಥವಾ, ಮಾಲೀಕರಿದ್ದಾರೋ ಎಂಬುದು ಪತ್ತೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...