alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲ ಮಾಹಿತಿ ಎಕ್ಸೆಲ್ ಶೀಟ್ ನಲ್ಲಿ ಕೇಳುವ ಪತಿಯಿಂದ ಬಿಡುಗಡೆ ಬಯಸಿದ್ದಾಳೆ ಪತ್ನಿ

ರೊಟ್ಟಿ 20 ಸೆಂಟಿಮೀಟರ್ ಗೋಲವಿರಬೇಕು. ಉಪಹಾರದ ಮೆನುವನ್ನು ಒಂದು ದಿನ ಮೊದಲೇ ಕಳುಹಿಸಿ ಒಪ್ಪಿಗೆ ಪಡೆಯಬೇಕು. ಪ್ರತಿ ದಿನ ಎಷ್ಟು ಗೋಧಿ ಹಿಟ್ಟು, ಅಕ್ಕಿ, ಎಣ್ಣೆ ಸೇರಿದಂತೆ ತರಕಾರಿ ಎಷ್ಟು ಖರ್ಚಾಯ್ತು ಎಂಬುದನ್ನು ಎಕ್ಸೆಲ್ ಶೀಟ್ ನಲ್ಲಿ ಟೈಪ್ ಮಾಡಿ ಅದನ್ನು ಇ-ಮೇಲ್ ಮೂಲಕ ಕಳುಹಿಸಬೇಕು. ಇದು ಒಬ್ಬ ಪತಿ, ಪತ್ನಿಗೆ ಹೇರಿರುವ ಶರತ್ತು.

ಹೌದು, ಅನೇಕ ವರ್ಷಗಳಿಂದ ಪತ್ನಿ, ಪತಿಗಾಗಿ ಇದನ್ನೆಲ್ಲ ಮಾಡ್ತಾ ಬಂದಿದ್ದಾಳೆ. ಪತಿಯ ಪ್ರೋಟೋಕಾಲ್ ಅನುಸರಿಸಿ ಸುಸ್ತಾಗಿರುವ ಪತ್ನಿ ಈಗ ವಿಚ್ಛೇದನಕ್ಕೆ ಮುಂದಾಗಿದ್ದಾಳೆ. ಪುಣೆ ನಿವಾಸಿ ಮಹಿಳೆ 2008ರಲ್ಲಿ ಇಂಜಿನಿಯರ್ ಪತಿಯನ್ನು ಮದುವೆಯಾಗಿದ್ದಾಳೆ. ಆರಂಭದಲ್ಲಿ ಎಲ್ಲವೂ ಸರಿಯಿತ್ತಂತೆ. ನಿಧಾನವಾಗಿ ಪತಿ ಹಿಂಸೆ ಹೆಚ್ಚಾಯ್ತಂತೆ.

ಪತ್ನಿಗೆ ಹೊಡೆಯುವ ಇಂಜಿನಿಯರ್ ಪತಿ ಪ್ರತಿ ದಿನ ಎಕ್ಸೆಲ್ ಶೀಟ್ ನಲ್ಲಿ ಎಲ್ಲ ವಿವರ ಕೇಳುತ್ತಾನಂತೆ. ಒಂದು ವೇಳೆ ಕೆಲಸ ಮಾಡದೆ ಹೋದಲ್ಲಿ ಹೊಡೆಯುತ್ತಾನಂತೆ. ಪತಿ ಹಿಂಸೆಗೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ನಿರ್ಧರಿಸಿದ್ದಳಂತೆ. ಆದ್ರೆ ಮಗಳ ಮುಖ ನೋಡಿ ಸುಮ್ಮನಿದ್ದಾಳಂತೆ.

ಸಿಟ್ಟಿನಲ್ಲಿ ಪತಿ ಮಗಳನ್ನೇ ಕೊಲೆ ಮಾಡುವುದಾಗಿ ಬೆದರಿಸಿದ್ದನಂತೆ. 20 ಸೆಂಟಿಮೀಟರ್ ರೊಟ್ಟಿ ಸಿದ್ಧಪಡಿಸುವ ಜೊತೆಗೆ ನಾಳೆ ಬೆಳಿಗ್ಗೆ ಏನು ಉಪಹಾರ ಎಂಬುದನ್ನು ಹಿಂದಿನ ದಿನವೇ ಪತಿಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕಂತೆ. ಪತಿಯ ಈ ವಿಚಿತ್ರ ಹಿಂಸೆಗೆ ಬೇಸತ್ತ ಮಹಿಳೆ ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...