alex Certify
ಕನ್ನಡ ದುನಿಯಾ       Mobile App
       

Kannada Duniya

ಎಸಿ ಬೋಗಿಯಲ್ಲಿ ಹುಡುಗಿ ಮಾಡ್ತಿದ್ಲು ಇಂಥ ಕೆಲಸ..!

woman-arrested-for-allegedly-stealing-10-mobile-phones-on-a-train

ಸ್ವತಂತ್ರ ಹಾಗೂ ಆರಾಮದ ಪ್ರಯಾಣಕ್ಕಾಗಿ ಜನರು ಎಸಿ ಬೋಗಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಎಸಿ ಬೋಗಿ ಕೂಡ ಸುರಕ್ಷಿತವಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗ್ತಿದೆ. ಎಸಿ ಬೋಗಿಯನ್ನು ಆಯ್ದುಕೊಳ್ಳುತ್ತಿದ್ದ ಈ ಹುಡುಗಿ ಪ್ರಯಾಣಿಕರಿಗೆ ಮಣ್ಣು ಮುಕ್ಕಿಸ್ತಿದ್ದಳು.

ಬಿಹಾರದ ನಿವಾಸಿ ಸೋನಿ ಕುಮಾರಿ ವಿದ್ಯಾರ್ಥಿನಿ. ದೆಹಲಿಯಿಂದ ಅವಧ್-ಅಸ್ಸಾಂ ಎಕ್ಸ್ಪ್ರೆಸ್ ರೈಲು ಹತ್ತಿದ ಸೋನಿ ಎಸಿII ಪ್ರಯಾಣಿಕರ ಸೆಲ್ ಫೋನ್ ಕದ್ದಿದ್ದಾಳೆ. ಈ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಸೋನಿಯನ್ನು ವಶಕ್ಕೆ ಪಡೆದಿದ್ದಾರೆ.

ಸೋನಿ ಬ್ಯಾಗ್ ಚೆಕ್ ಮಾಡಿದ ಪೊಲೀಸರು ಕಂಗಾಲಾಗಿದ್ದಾರೆ. ಬ್ಯಾಗ್ ನಲ್ಲಿ ಚೆನ್ನೈ ವಿಮಾನ ಟಿಕೆಟ್ ಜೊತೆಗೆ 10 ಫೋನುಗಳು ಸಿಕ್ಕಿವೆ. ಎಸಿ ಬೋಗಿ ಪ್ರಯಾಣಿಕರ ಫೋನ್ ಕದ್ದು ಚೆನ್ನೈನಲ್ಲಿ ಮಾರಾಟ ಮಾಡುವ ಪ್ಲಾನ್ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...