alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯಾಯ ಮಂದಿರದಲ್ಲಿ ನಡೀತು ಅತ್ಯಾಚಾರ

ನ್ಯಾಯ ಮಂದಿರದಲ್ಲಿ ವಕೀಲೆ ಮೇಲೆ ಅತ್ಯಾಚಾರ ನಡೆದಿದೆ. ದೆಹಲಿಯ ಕೋರ್ಟ್ ಒಂದರಲ್ಲಿ ಈ ಘಟನೆ ನಡೆದಿದೆ. ಪೀಡಿತೆ ಸಹ ವಕೀಲನ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಘಟನೆ ನ್ಯಾಯಾಲಯದಲ್ಲಿ ಚರ್ಚೆಯ ವಿಷ್ಯವಾಗಿ ಮಾರ್ಪಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಕೀಲನನ್ನು ಬಂಧಿಸಿದ್ದಾರೆ.

ದೆಹಲಿಯ ಜಿಲ್ಲಾ ಸಾಕೆತ್ ಕೋರ್ಟ್ ನಲ್ಲಿ ಪೀಡಿತೆ ಅಭ್ಯಾಸ ಮಾಡುತ್ತಿದ್ದಳಂತೆ. ಪೀಡಿತೆ ಜೊತೆ ಲಾ ಪ್ರ್ಯಾಕ್ಟಿಸ್ ಮಾಡ್ತಿರುವ ವಕೀಲನೊಬ್ಬ ತನ್ನ ರೂಂ ನಂಬರ್ 247 ಕ್ಕೆ ಕರೆದೊಯ್ದಿದ್ದಾನೆ. ತನ್ನ ರೂಮಿನಲ್ಲಿಯೇ ಪೀಡಿತೆಗೆ ಬೆದರಿಸಿ ಅತ್ಯಾಚಾರವೆಸಗಿದ್ದಾನಂತೆ.

ಪೀಡಿತೆ ದೂರಿನ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಕೋರ್ಟ್ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಕೋರ್ಟ್ ಆವರಣದಲ್ಲಿ ನಡೆದ ಈ ಘಟನೆ ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ನ್ಯಾಯ ನೀಡುವ ಸ್ಥಳದಲ್ಲಿಯೇ ಹೇಯ ಕೃತ್ಯ ನಡೆದ್ರೆ ನಮ್ಮ ಗತಿ ಏನು ಎಂಬ ಪ್ರಶ್ನೆ ಎದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...