alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮೀಯ ಮಾದರಿಯಲ್ಲಿ ಸರಗಳ್ಳಿಯರನ್ನು ಬೆನ್ನಟ್ಟಿ ಹಿಡಿದ 72 ರ ವೃದ್ದೆ

chain-snaching3478ತನ್ನ ಬಂಗಾರದ ಸರವನ್ನು ಇಬ್ಬರು ಸರಗಳ್ಳಿಯರು ಕದ್ದು ತಪ್ಪಿಸಿಕೊಳ್ಳಲು ಮುಂದಾದ ವೇಳೆ 72 ವರ್ಷದ ವೃದ್ದೆಯೊಬ್ಬರು ಸಿನಿಮೀಯ ಮಾದರಿಯಲ್ಲಿ ಅವರನ್ನು ಬೆನ್ನಟ್ಟಿ ಹಿಡಿದ ಘಟನೆ ಚೆನ್ನೈನ ಅಂಬತ್ತೂರಿನಲ್ಲಿ ನಡೆದಿದೆ.

ಸೀತಾಲಕ್ಷ್ಮಿ ಎಂಬವರು ತಮ್ಮ ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ತೆರಳಿದ್ದರು. ವಾಪಾಸ್ ಮನೆಗೆ ತೆರಳಲು ಆಟೋ ಏರಿದ್ದು, ಇದೇ ಆಟೋದಲ್ಲಿ ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರಿದ್ದರು. ಇವರುಗಳು ಚಾಕಚಕ್ಯತೆಯಿಂದ ಸೀತಾಲಕ್ಷ್ಮಿಯವರ ಚಿನ್ನದ ಸರವನ್ನು ಎಗರಿಸಿದ್ದಾರೆ.

ಸ್ವಲ್ಪ ದೂರ ಹೋದ ಬಳಿಕ ಅವರುಗಳು ಆಟೋದಿಂದ ಇಳಿದಿದ್ದು, ಈ ವೇಳೆ ಒಬ್ಬಾಕೆಯ ಪರ್ಸ್ ಕೆಳಗೆ ಬಿದ್ದಿದೆ. ಅದರೊಳಗೆ ತಮ್ಮ ಸರ ಕಂಡು ಗಾಬರಿಯಾದ ಸೀತಾಲಕ್ಷ್ಮಿ ಪರೀಕ್ಷಿಸಿಕೊಂಡ ವೇಳೆ ಸರ ಕಳುವಾಗಿರುವುದು ಗೊತ್ತಾಗಿದೆ.

ಸರಗಳ್ಳಿಯರನ್ನು ಕೂಗಿ ಕರೆಯುತ್ತಲೇ ಮತ್ತೊಂದು ಆಟೋ ಏರಿದ ಅವರುಗಳು ಪರಾರಿಯಾಗಲು ಯತ್ನಿಸಿದ್ದಾರೆ. ಛಲ ಬಿಡದ ಸೀತಾಲಕ್ಷ್ಮಿ ತಾವಿದ್ದ ಆಟೋ ಚಾಲಕನಿಗೆ ವಿಷಯ ತಿಳಿಸಿ ಆ ಆಟೋವನ್ನು ಬೆಂಬತ್ತಿದ್ದಾರೆ. ಸುಮಾರು 2 ಕಿ.ಮೀ. ಸಿನಿಮೀಯ ಚೇಸ್ ಬಳಿಕ ಆ ಆಟೋವನ್ನು ತಡೆಗಟ್ಟಲಾಗಿದೆ. ಸಿಕ್ಕಿ ಬಿದ್ದ ಸರಗಳ್ಳಿಯರು ಮೊದಲು ಆರೋಪ ನಿರಾಕರಿಸಿದರಾದರೂ ಬಳಿಕ ಸರ ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ. ಸಾರ್ವಜನಿಕರ ಸಹಾಯದಿಂದ ಅವರುಗಳನ್ನು ಹಿಡಿದು ಪೊಲೀಸರಿಗೊಪ್ಪಿಸಲಾಗಿದ್ದು, ವಿಚಾರಣೆ ವೇಳೆ ಬೆಂಗಳೂರು ಮೂಲದ ಕಾಳಿ ಹಾಗೂ ಕವಿತಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...