alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಾಜವಾದಿ ಪಾರ್ಟಿಯ ಆದಾಯ ಎಷ್ಟಿದೆ ಗೊತ್ತಾ…?

ದೇಶದ ವಿವಿಧ ಪ್ರಾದೇಶಿಕ ಪಕ್ಷಗಳ ಆದಾಯದ ವಿವರವನ್ನು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಹಿರಂಗಪಡಿಸಿದ್ದು, ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಾರ್ಟಿ 82.76 ಕೋಟಿ ಆದಾಯ ಹೊಂದುವುದರ ಮೂಲಕ ಅಗ್ರಸ್ಥಾನದಲ್ಲಿದೆ.

2016-17 ನೇ ಸಾಲಿನಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಾದೇಶಿಕ ಪಕ್ಷಗಳು ಸಲ್ಲಿಸಿದ್ದ ಆದಾಯದ ವಿವರವನ್ನು ಪರಿಗಣಿಸಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ದ್ವಿತೀಯ ಸ್ಥಾನದಲ್ಲಿ ತೆಲುಗುದೇಶಂ ಪಕ್ಷ ಇದೆ. ತೆಲುಗುದೇಶಂ ಪಕ್ಷ 72.92 ಕೋಟಿ ಆದಾಯ ಹೊಂದಿದ್ದರೆ,  ಎಐಎಡಿಎಂಕೆ 48.88 ಕೋಟಿ ಆದಾಯ ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ.

ದೇಶದಲ್ಲಿ ಒಟ್ಟು 32 ಪ್ರಾದೇಶಿಕ ಪಕ್ಷಗಳಿವೆ. ಈ ಪೈಕಿ 16 ಪಕ್ಷಗಳು ಮಾತ್ರ ತಮ್ಮ ಆದಾಯದ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿವೆ. ನ್ಯಾಷನಲ್ ಕಾನ್ಫರೆನ್ಸ್, ಆಮ್ ಆದ್ಮಿ ಪಾರ್ಟಿ ಹಾಗೂ ರಾಷ್ಟ್ರೀಯ ಜನತಾದಳ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ 321.03 ಕೋಟಿ ರೂಪಾಯಿಗಳಾಗಿದ್ದು, 16 ಪಕ್ಷಗಳನ್ನು ಹೊರತುಪಡಿಸಿ ಇನ್ನುಳಿದ ಪಕ್ಷಗಳ ಆದಾಯದ ಮಾಹಿತಿ ತಿಳಿದುಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...