alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿರುವ ಈ ಅಭ್ಯರ್ಥಿಯ ಆಸ್ತಿ ಎಷ್ಟಿದೆ ಗೊತ್ತಾ…?

ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದು, ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿರುವ ಬಿಗ್ ಬಿ ಪತ್ನಿ ಜಯಾ ಬಚ್ಚನ್ ತಾವು ಹಾಗೂ ಪತಿ ಹೊಂದಿರುವ ಒಟ್ಟಾರೆ ಆಸ್ತಿ ಮೌಲ್ಯ 1 ಸಾವಿರ ಕೋಟಿ ರೂಪಾಯಿಗಳೆಂದು ಚುನಾವಣಾ ಆಯೋಗದ ಮುಂದೆ ಪ್ರಮಾಣ ಪತ್ರ ಸಲ್ಲಿಸಿದ್ದರು.

ರಾಜ್ಯ ಸಭೆಗೆ ಜಯಾ ಬಚ್ಚನ್ ಆಯ್ಕೆಯಾಗುವುದು ಖಚಿತವಾಗಿದ್ದು, ಅವರೇ ದೇಶದ ಶ್ರೀಮಂತ ಸಂಸದೆ ಎನಿಸಿಕೊಳ್ಳಲಿದ್ದಾರೆಂದು ಭಾವಿಸಲಾಗಿತ್ತು. ಆದರೆ ಈಗ ಬಿಹಾರದ ಜೆಡಿ(ಯು) ಅಭ್ಯರ್ಥಿ ತಮ್ಮ ಒಟ್ಟಾರೆ ಆಸ್ತಿಯ ಮೌಲ್ಯ 4 ಸಾವಿರ ಕೋಟಿ ರೂಪಾಯಿಗಳೆಂದು ಘೋಷಿಸಿಕೊಂಡಿದ್ದಾರೆ. ಹೀಗಾಗಿ ಶ್ರೀಮಂತ ಸಂಸದನ ಪಟ್ಟ ಅವರ ಪಾಲಾಗಲಿದೆ.

ಮಾಪ್ರಾ ಲ್ಯಾಬೋರೆಟರೀಸ್ ಪ್ರೈವೆಟ್ ಲಿಮಿಟೆಡ್ ಹಾಗೂ ಅರಿಸ್ಟೋ ಫಾರ್ಮಾಸ್ಯೂಟಿಕಲ್ ಮಾಲೀಕರಾಗಿರುವ 78 ವರ್ಷದ ಡಾಕ್ಟರ್ ಮಹೇಂದ್ರ ಪ್ರಸಾದ್ ರನ್ನು ಕಿಂಗ್ ಪ್ರಸಾದ್ ಎಂದೇ ಕರೆಯಲಾಗುತ್ತಿದ್ದು, ಇವರು ಒಟ್ಟು 4,010.21 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 1980 ರಲ್ಲಿ ಮೊದಲ ಬಾರಿಗೆ ಜೆಹನಾಬಾದ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ಬಳಿಕ ರಾಜ್ಯಸಭೆಗೆ ಪ್ರವೇಶಿಸಿದ್ದರು. ಈ ಬಾರಿ ಆಯ್ಕೆಯಾದರೆ 7 ನೇ ಬಾರಿಗೆ ಡಾ. ಪ್ರಸಾದ್ ರಾಜ್ಯಸಭೆಗೆ ಪ್ರವೇಶಿಸಿದಂತಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...