alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದವನು ಮಾಡಿದ್ದೇನು?

464389-murder-crime-sceneಹೈದರಾಬಾದ್ ನ ಮೈಲಾರದೇವಪಲ್ಲಿಯಲ್ಲೊಂದು ಶಾಕಿಂಗ್ ಘಟನೆ ನಡೆದಿದೆ. ಅಂತ್ಯಸಂಸ್ಕಾರಕ್ಕೆ ಹಣವಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ತನ್ನ 16 ವರ್ಷದ ಪುತ್ರಿಯ ಶವವನ್ನು ಡ್ರೈನೇಜ್ ನಲ್ಲಿ ಎಸೆದಿದ್ದಾನೆ.

ದಿನಗೂಲಿ ನೌಕರನಾಗಿರುವ ಪೆಂಟಯ್ಯ ಎಂಬಾತನ ಪುತ್ರಿ ಭವಾನಿ ಮೇ ಮೊದಲ ವಾರದಲ್ಲಿ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಕೆಲಸದಿಂದ ಪೆಂಟಯ್ಯ ಮರಳಿ ಬಂದ ವೇಳೆ ಮಗಳು ಸಾವನ್ನಪ್ಪಿರುವುದು ಕಂಡು ಬಂದಿದೆ.

ಮಗಳ ಅಂತ್ಯಸಂಸ್ಕಾರ ಹಾಗೂ ನಂತರದ ಕಾರ್ಯಗಳಿಗೆ ಸಾವಿರಾರು ರೂ. ಹಣ ಬೇಕಾಗುತ್ತದೆಂಬ ಕಾರಣಕ್ಕೆ ಪೆಂಟಯ್ಯ ರಾತ್ರೋರಾತ್ರಿ ಮನೆಯ ಹಿಂಬದಿಯಲ್ಲಿದ್ದ ದೊಡ್ಡ ಡ್ರೈನೇಜ್ ಗೆ ಮಗಳ ಶವವನ್ನು ಬಿಸಾಡಿದ್ದಾನೆ. ಇತ್ತೀಚೆಗೆ ಕಾಲೋನಿಯ ಮಕ್ಕಳು ಬುರುಡೆಯೊಂದನ್ನು ಹಿಡಿದು ಆಟವಾಡುತ್ತಿದ್ದುದ್ದನ್ನು ಕಂಡ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದಾಗ ಪೆಂಟಯ್ಯ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಡ್ರೈನೇಜ್ ನಲ್ಲಿದ್ದ ಅಸ್ಥಿಪಂಜರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...