alex Certify
ಕನ್ನಡ ದುನಿಯಾ       Mobile App
       

Kannada Duniya

2009 ರ ‘ಸರಿಗಮಪ ಲಿಟ್ಲ್ ಚಾಂಪ್’ ವಿಜೇತನ ಮೇಲೆ ಹಲ್ಲೆ

saregamapa winner2009 ರ ‘ಸರಿಗಮಪ ಲಿಟ್ಲ್ ಚಾಂಪ್’ ರಿಯಾಲಿಟಿ ಷೋ ನಲ್ಲಿ ವಿಜೇತನಾಗಿದ್ದ ಹೇಮಂತ್ ಬ್ರಿಜ್ವಾಸಿ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಸಂಬಂಧ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಈ ರಿಯಾಲಿಟಿ ಷೋ ನಲ್ಲಿ ಪಾಲ್ಗೊಂಡಿದ್ದ ಹೇಮಂತ್ ಬ್ರಿಜ್ವಾಸಿ ತನ್ನ ಸುಮಧುರ ಕಂಠದಿಂದ ವೀಕ್ಷಕರನ್ನು ಮೋಡಿ ಮಾಡಿದ್ದಲ್ಲದೇ ವಿಜೇತನಾಗಿ ಹೊರ ಹೊಮ್ಮಿದ್ದ. ಪ್ರಸ್ತುತ ‘ಇಂಡಿಯಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಷೋ ನಲ್ಲಿ ಪಾಲ್ಗೊಂಡಿರುವ ಹೇಮಂತ್, ತನ್ನ ತಂದೆಯ ಜೊತೆ ಕಾರಿನಲ್ಲಿ ಹೋಗುವಾಗ ಹಲ್ಲೆ ನಡೆಸಲಾಗಿದೆ.

ಕೌಟುಂಬಿಕ ಕಲಹವೇ ಹಲ್ಲೆಗೆ ಕಾರಣವೆನ್ನಲಾಗಿದ್ದು, ತನ್ನ ತಂದೆ ಹುಕುಂಚಂದ್ ಬ್ರಿಜ್ವಾಸಿ ಹಾಗೂ ನೆರೆಮನೆಯ ಭೂರಾ ಎಂಬವರ ಜೊತೆ ಬಂಕಿ ಬಿಹಾರಿ ದೇವಾಲಯಕ್ಕೆ ಹೋಗುವಾಗ ಕಾರನ್ನು ಅಡ್ಡಗಟ್ಟಿದ ಸಹೋದರ ಸಂಬಂಧಿಗಳಾದ ಭೋಲಾ ಹಾಗೂ ಮಾಧವ್ ಇತರೆ ಇಬ್ಬರ ಜೊತೆ ಸೇರಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದೆ. ಹೇಮಂತ್ ಮತ್ತವರ ತಂದೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈ ಸಂಬಂಧ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...