alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ ಮಂದಿರ ನಿರ್ಮಾಣ ವಿಳಂಬ; ಮೋದಿ ವಿರುದ್ಧ ಗುಡುಗಿದ ಠಾಕ್ರೆ

ಮುಂಬೈನಲ್ಲಿ ನಡೆದ ವಾರ್ಷಿಕ ವಿಜಯದಶಮಿ ರ್ಯಾಲಿಯಲ್ಲಿ ಪಾಲ್ಗೊಂಡ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡದೇ ಇರುವುದಕ್ಕೆ ಪ್ರಧಾನಿ ಮೋದಿಯವರ ವಿರುದ್ದ ಹರಿಹಾಯ್ದಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಹಿಂದೂಗಳ ಬಹುದೊಡ್ಡ ಕನಸು. ಇನ್ನೂ ಯಾಕೆ ಇದನ್ನು ನಿರ್ಮಾಣ ಮಾಡಿಲ್ಲ. ಹೀಗೆ ತಡ ಮಾಡುತ್ತಿರುವುದಕ್ಕೆ ರಾಜಕೀಯ ಹುನ್ನಾರವೇನಾದರೂ ಇದೆಯಾ ಎಂದು ಠಾಕ್ರೆ ಮೋಯವರನ್ನು ಪ್ರಶ್ನಿಸಿದ್ದಾರೆ.

ಹಾಗೇ ಠಾಕ್ರೆ ನವೆಂಬರ್ ನಲ್ಲಿ ಅಯೋಧ್ಯೆಗೆ ತೆರಳಲಿದ್ದಾರಂತೆ. ರಾಮ ಜನ್ಮ ಭೂಮಿಯಲ್ಲೆ ನಿಂತು ಇನ್ನು ಯಾಕೆ ರಾಮ ಮಂದಿರ ನಿರ್ಮಾಣ ಮಾಡಿಲ್ಲ ಎಂದು ಮೋದಿಗೆ ಪ್ರಶ್ನಿಸಲಿದ್ದಾರಂತೆ. ಒಂದು ವೇಳೆ ಪ್ರಧಾನಿ ಮೋದಿ ಠಾಕ್ರೆ ಪ್ರಶ್ನೆಗೆ ಉತ್ತರಿಸದಿದ್ದರೆ ಠಾಕ್ರೆ ಅವರೇ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಮುಂದಾಗಲಿದ್ದಾರಂತೆ.

ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಧೈರ್ಯ ಇರುವುದು ಶಿವಸೇನೆಗೆ ಮಾತ್ರ ಎಂದು ರಾಮಜನ್ಮಭೂಮಿ ಟ್ರಸ್ಟ್ ನ ಮುಖ್ಯಸ್ಥರೆಲ್ಲರ ಅಭಿಪ್ರಾಯ. ಹಾಗಾಗಿ ಉದ್ಧವ್ ಠಾಕ್ರೆ ರಾಮ ಮಂದಿರದ ನಿರ್ಮಾಣಕ್ಕೆ ತೆರಳಲಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...