alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನಕ್ಕೆ ಕಾದಿದ್ಯಾ ಮತ್ತೊಂದು ಸರ್ಜಿಕಲ್ ಸ್ಟ್ರೈಕ್…?

ಗಡಿಯಲ್ಲಿ ಭಾರತೀಯ ಯೋಧನ ಹತ್ಯೆ ಮಾಡಿ ಪುಂಡಾಟ ಮೆರೆಯುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತದ ಆರ್ಮಿ ಜನರಲ್ ಬಿಪಿನ್ ರಾವತ್ ಕೆಂಡಾಮಂಡರಾಗಿದ್ದಾರೆ. ಪಾಕಿಸ್ತಾನದ ನಡೆಯನ್ನ ಕಟು ಮಾತುಗಳಲ್ಲಿ ಟೀಕಿಸಿದ ಬಿಪಿನ್ ರಾವತ್, ಪಾಕಿಸ್ತಾನಕ್ಕೆ 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಂತ ಸರ್ ಪ್ರೈಸ್ ಮತ್ತೊಮ್ಮೆ ಸಿಗಬಹುದು ಅನ್ನೋ ಸೂಚನೆ ನೀಡಿದ್ದಾರೆ.

ಪಾಕಿಸ್ತಾನದ ಇಂತಾ ಅನಾಗರಿಕ ನಡೆಗೆ ನಿದರ್ಶನ ಸಿಕ್ತಿರೋದು ಇದು ಮೊದಲ ಬಾರಿ ಏನಲ್ಲ. ಪಾಕಿಸ್ತಾನದ ಉಗ್ರರು ಭಾರತೀಯ ಯೋಧನನ್ನ ಅಪಹರಿಸಿ ಹಿಂಸೆ ಮಾಡಿ ಕೊಲೆ ಮಾಡಿದ್ದಾರೆ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕೂಡ ಶಾಂತಿ ನೆಲಸೋಕೆ ಪಾಕಿಸ್ತಾನದ ಉಗ್ರರು ಮತ್ತು ಸೇನೆ ಅಡ್ಡಗಾಲು ಹಾಕ್ತಿದೆ. ಕಾಶ್ಮೀರದಲ್ಲಿ ಇಂತ ಪರಿಸ್ಥಿತಿಯ ಮುಂದುವರೆಯಬೇಕು ಅನ್ನೋದೇ ಪಾಕಿಸ್ತಾನದ ಉದ್ದೇಶ ಅಂತ ರಾವತ್ ಮಾತಿನ ಚಾಟಿ ಬೀಸಿದ್ದಾರೆ.

ಕಣಿವೆ ರಾಜ್ಯದ ಯುವಕರನ್ನು ದಾರಿ ತಪ್ಪಿಸಿ ಭಾರತದಲ್ಲಿ ನೆತ್ತರು ಹರಿಸಬೇಕೆನ್ನುವ ಪಾಕಿಸ್ತಾನದ ಇಚ್ಚೆ ಪೂರ್ಣಗೊಳ್ಳುವುದಿಲ್ಲ ಅಂತ ರಾವತ್ ಬಿಸಿ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲ ಒಂದು ಕಡೆ ಶಾಂತಿ ಮಾತುಕತೆಯನ್ನಾಡುತ್ತಾ ಮತ್ತೊಂದು ಕಡೆ ಉಗ್ರರನ್ನು ಛೂ ಬಿಡುತ್ತಿರುವ ಪಾಕಿಸ್ತಾನದ ಕಾರ್ಯ ಫಲಪ್ರದವಾಗೋದಿಲ್ಲ ಎಂದಿದ್ದಾರೆ.

ಪಾಕಿಸ್ತಾನದ ಅನಾಗರಿಕ ವರ್ತನೆ ಮತ್ತು ಗಡಿಯಲ್ಲಿ ನಡೆಸುತ್ತಿರುವ ಪುಂಡಾಟಕ್ಕೆ ಅದರದ್ದೇ ಶೈಲಿಯಲ್ಲಿ ಉತ್ತರ ಕೊಡ್ತಿವಿ ಅಂದಿದ್ದಾರೆ ರಾವತ್. ಆದ್ರೆ ಆ ಉತ್ತರ ಮಾಮೂಲಿಯಾಗಿರೋದಿಲ್ಲ. ಆದ್ರೆ ಪಾಕಿಸ್ತಾನದ ಸೈನ್ಯ ಅದೇ ನೋವನ್ನು ಅನುಭವಿಸಲಿದೆ ಅಂತ ಮುಂದಿನ ದಿನಗಳ ಸೂಚನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...