alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ನೆಪದಲ್ಲಿ 50 ಹುಡುಗಿಯರಿಂದ ಹಣ ಪೀಕಿದ್ದ ವ್ಯಕ್ತಿ ಅಂದರ್

ಸೇನೆಯ ಹಿರಿಯ ಅಧಿಕಾರಿ ಎನ್ನುವ ಸುಳ್ಳು ಹೇಳಿಕೊಂಡು ಮ್ಯಾಟ್ರಿಮೋನಿ ವೆಬ್ ಸೈಟ್ ಗಳಲ್ಲಿ ಹುಡುಗಿಯರನ್ನು ಪರಿಚಯಿಸಿಕೊಂಡು ಮದುವೆ ಪ್ರಸ್ತಾಪ ಮಾಡಿ ಮನೆ ಖರೀದಿ ನೆಪದಲ್ಲಿ 50ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಜುಲಿಯನ್ ಸಿನ್ಹಾ ಆಲಿಯಾಸ್ ಸಿದ್ದಾರ್ಥ್ ಮೆಹ್ರಾ ಎನ್ನುವ ವ್ಯಕ್ತಿ ಮದುವೆಯ ನೆಪದಲ್ಲಿ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆದರೆ ಈ ವೇಳೆ ಅಪಘಾತದಲ್ಲಿ ಜುಲಿಯನ್ ಸಿನ್ಹಾ ತನ್ನೆರೆಡು ಕಾಲುಗಳನ್ನು ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.

ವಿವಿಧ ಮ್ಯಾಟ್ರಿಮೋನಿಗಳಲ್ಲಿ ಬೇರೆ ಬೇರೆ ಯುವಕರ ಭಾವಚಿತ್ರದೊಂದಿಗೆ ಖಾತೆ ಆರಂಭಿಸಿದ್ದ ಜುಲಿಯನ್, ತಾನೊಬ್ಬ ಸೇನಾಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಮದುವೆ ಪ್ರಸ್ತಾಪವಾದ ಬಳಿಕ, ಆರ್ಮಿ ಹೌಸಿಂಗ್ ಸ್ಕೀಂ ಹೆಸರಲ್ಲಿ ಮನೆ ಖರೀದಿಸಲು, 50 ಸಾವಿರದ ಅವಶ್ಯತೆಯಿದೆ ಎಂದು ಹೇಳಿ ಯುವತಿಯರಿಂದ ತನ್ನ ಖಾತೆಗೆ ಹಣ ಹಾಕಿಸಿಕೊಂಡ ಕೂಡಲೇ ಯುವತಿಯರೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದ.

ಈ ರೀತಿ‌ ಹಣ ಕಳೆದುಕೊಂಡ ಕೆಲ ಯುವತಿಯರು ಪೊಲೀಸರಿಗೆ ದೂರು ನೀಡಲು ಹೋದಾಗಲೇ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ 50ಕ್ಕೂ ಹೆಚ್ಚು ಯುವತಿಯರಿಗೆ ಮೋಸ ಮಾಡಿದ್ದಾನೆ ಎನ್ನುವುದು ಬಹಿರಂಗಗೊಂಡಿದೆ‌. ಮೊಬೈಲ್ ನಂಬರ್ ಸಹಾಯದೊಂದಿಗೆ ಪೊಲೀಸರು ಜಾಲ ಬೀಸಿದಾಗ ಯುವಕ ಸೆರೆಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...