alex Certify
ಕನ್ನಡ ದುನಿಯಾ       Mobile App
       

Kannada Duniya

‘ಫ್ರೀಡಂ251’ ಬಗ್ಗೆ ರಿಂಗಿಂಗ್ ಬೆಲ್ಸ್ ನಿರ್ದೇಶಕ ಹೇಳಿದ ರಹಸ್ಯ

mohith 99

ವಿಶ್ವದಲ್ಲಿಯೇ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳಿದ, ರಿಂಗಿಂಗ್ ಬೆಲ್ಸ್ ಕಂಪನಿ ಬಗ್ಗೆಯೇ ಎಲ್ಲಾ ಕಡೆಗಳಲ್ಲಿ ಚರ್ಚೆಯಾಗುತ್ತಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಕೊಡಲು ಸಾಧ್ಯವಾಗುವುದಿಲ್ಲ. ಕಂಪನಿ ಹೇಳಿದಂತೆ ಎಲ್ಲಾ ಫೀಚರ್ ಗಳು ಇರುವ ಸ್ಮಾರ್ಟ್ ಫೋನ್ ಒಂದಕ್ಕೆ ಮಾರುಕಟ್ಟೆಯಲ್ಲಿ 3,000 ರೂ.ನಿಂದ 4,000 ರೂ.ವರೆಗೆ ಬೆಲೆಯಾಗುತ್ತದೆ ಎನ್ನಲಾಗಿತ್ತು.

ಎಲ್ಲಾ ಕಡೆಗಳಲ್ಲಿ ರಿಂಗಿಂಗ್ ಬೆಲ್ಸ್ ಕಂಪನಿಯ ‘ಫ್ರೀಡಂ251’ ಸ್ಮಾರ್ಟ್ ಫೋನ್ ರಿಂಗಣಿಸುತ್ತಿದೆ. ಆದರೆ, ಅದು ಮಾತುಕತೆಯಲ್ಲಿ ಮಾತ್ರ. ಸುಮಾರು 6 ಕೋಟಿ ಮಂದಿ ಬುಕ್ಕಿಂಗ್ ಮಾಡಿದ್ದರೂ, ವಾಸ್ತವದಲ್ಲಿ ಕಂಪನಿ ಇನ್ನೂ ‘ಫ್ರೀಡಂ251’ ಸ್ಮಾರ್ಟ್ ಫೋನ್ ತಯಾರಿಕೆಯನ್ನೇ ಆರಂಭಿಸಿಲ್ಲ. ಈ ನಡುವೆ ಕಂಪನಿಯ ಹವಾ ಜೋರಾಗಿದ್ದ ಕಾರಣ, ತೆರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನೋಯ್ಡಾದಲ್ಲಿರುವ ಕಂಪನಿಯ ಕಚೇರಿಯಲ್ಲೂ ಕೂಡ ಪರಿಶೀಲನೆ ನಡೆಸಿದ್ದವು.

‘ಫ್ರೀಡಂ 251’ ತಯಾರಿಕೆ ಆರಂಭವಾಗುವ ಮೊದಲೇ ಕಂಪನಿಯಿಂದ ಫೋನ್ ಬಿಡುಗಡೆ ಮಾಡಲಾಗಿತ್ತು. ಬೇರೆ ಕಂಪನಿ ಮೊಬೈಲ್ ಗೆ ಸ್ಟಿಕ್ಕರ್ ಹಚ್ಚಿ ಬಿಡುಗಡೆ ಮಾಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಕಂಪನಿಯ ನಿರ್ದೇಶಕ ಮೋಹಿತ್ ಗೋಯೆಲ್ ಈ ಕುರಿತಂತೆ ಮೌನ ಮುರಿದಿದ್ದಾರೆ.

ಬುಕಿಂಗ್ ಮಾಡಿದವರಿಗೆ ಮುಂದಿನ ದಿನಗಳಲ್ಲಿ ಫೋನ್ ಕೈ ಸೇರಲಿದೆ. ಇಷ್ಟು ಕಡಿಮೆ ಬೆಲೆಗೆ ಫೋನ್ ಕೊಟ್ಟರೂ, ನಮಗೆ ಪ್ರತಿ ಫೋನ್ ಮೇಲೆ 31 ರೂಪಾಯಿ ಲಾಭವಾಗುತ್ತದೆ. ಒಂದೇ ದಿನದಲ್ಲಿ ಎಲ್ಲವೂ ಸಾಧ್ಯವಾಗುವುದಿಲ್ಲ. ಹಂತಹಂತವಾಗಿ ಉತ್ಪಾದಿಸಿ ಬುಕ್ ಮಾಡಿದವರಿಗೆ ಫೋನ್ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...