alex Certify
ಕನ್ನಡ ದುನಿಯಾ       Mobile App
       

Kannada Duniya

ದಿಲ್ಲಿಯನ್ನು ಲಂಡನ್ ಮಾಡ್ತಾರಂತೆ ಕೇಜ್ರಿವಾಲ್..!

arvind-kejriwal-pti_650x400_71486130883

ದೆಹಲಿ ಪುರಸಭೆ ಚುನಾವಣೆಯಲ್ಲಿ ಎಎಪಿಗೆ ಮತ ಹಾಕಿದ್ರೆ ದೆಹಲಿಯನ್ನು ಲಂಡನ್ ಮಾಡೋದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ರಾಷ್ಟ್ರರಾಜಧಾನಿಯನ್ನು ಸಂಪೂರ್ಣ ಸ್ವಚ್ಛಗೊಳಿಸೋದಾಗಿ ಭರವಸೆ ನೀಡಿದ್ದಾರೆ.

ಮಧ್ಯಪ್ರದೇಶ, ಚತ್ತೀಸ್ ಗಢದಲ್ಲಿ 10-15 ವರ್ಷಗಳಲ್ಲಿ ಬಿಜೆಪಿಯಿಂದ ಮಾಡಲು ಅಸಾಧ್ಯವಾದ ಕೆಲಸವನ್ನು ಎರಡೇ ವರ್ಷಗಳಲ್ಲಿ ಎಎಪಿ ದಿಲ್ಲಿಯಲ್ಲಿ ಮಾಡಿದೆ ಅಂತಾ ಅವರು ಹೇಳಿಕೊಂಡ್ರು. ಮುನ್ಸಿಪಲ್ ಎಲೆಕ್ಷನ್ ನಲ್ಲೂ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಿದ್ರೆ ಇನ್ನೊಂದು ವರ್ಷದಲ್ಲಿ ದೆಹಲಿಯನ್ನು ಲಂಡನ್ ನಂತೆ ಮಾಡುತ್ತೇನೆ ಎಂದ್ರು.

ಪುರಸಭೆ ಚುನಾವಣೆಗಾಗಿ ಪ್ರಚಾರ ಆರಂಭಿಸಿರುವ ಕೇಜ್ರಿವಾಲ್ ಗೆ ಉತ್ತಮ ನಗರದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮಾಜಿ ಶಾಸಕ ಮುಖೇಶ್ ಶರ್ಮಾ ನೇತೃತ್ವದಲ್ಲಿ ಪ್ರತಿಭಟಿಸಿದ ಕೆಲವರು, ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿದ್ರು. ಚುನಾವಣೆಗೆ ಖರ್ಚು ಮಾಡಲು ನಮ್ಮ ಬಳಿ ಹಣವಿಲ್ಲ, ಹಾಗಾಗಿ ಜನರೇ ನಮಗೆ ಸಹಾಯ ಮಾಡಬೇಕು. ಪ್ರತಿಯೊಬ್ಬರೂ ಕನಿಷ್ಟ 100 ಜನರ ಬಳಿ ಎಎಪಿಗೆ ಮತ ಹಾಕುವಂತೆ ಮನವಿ ಮಾಡಿ ಎಂದ ಕೇಜ್ರಿವಾಲ್, ಎಲ್ಲಾ 272 ಸ್ಥಾನಗಳಲ್ಲೂ ಎಎಪಿಯನ್ನು ಗೆಲ್ಲಿಸುವಂತೆ ಕರೆಕೊಟ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...