alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಿಂಹಕ್ಕೆ ಸಿಗುತ್ತಿಲ್ಲ ಮಾಂಸ, ಕೊಡಿ ಪಾಲಕ್ ಪನ್ನೀರ್’

cong-lion

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಸಾಯಿಖಾನೆಗಳ ಮೇಲೆ ಕೆಂಗಣ್ಣು ಬೀರಿದ ಬಳಿಕ ಹಲವು ಸಮಸ್ಯೆ ಎದುರಾಗಿದೆ.

ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಮಾಂಸಹಾರಿ ಪ್ರಾಣಿಗಳಿಗೆ ಮಾಂಸದ ಸಮಸ್ಯೆ ಎದುರಾಗಿದೆ. ಇಷ್ಟು ದಿನ ಕೋಣ, ದನದ ಮಾಂಸಗಳಿಗೆ ಒಗ್ಗಿಕೊಂಡಿದ್ದ ಪ್ರಾಣಿಗಳು ಚಿಕನ್ ತಿನ್ನಲು ಹಿಂದೇಟು ಹಾಕುತ್ತಿವೆ.

‘ಎತ್ವಾನ್ ಝೂ’ನಲ್ಲಿ ಗರ್ಭಿಣಿ ಸಿಂಹವೊಂದು ಚಿಕನ್ ತಿನ್ನುತ್ತಿಲ್ಲ. ಬೇರೆ ಪ್ರಾಣಿಗಳು ಕೂಡ ಚಿಕನ್ ಮುಟ್ಟುತ್ತಿಲ್ಲ. ಅಲ್ಲದೇ, ಚಿಕನ್ ಪೂರೈಕೆ ಮಾಡುವುದು ಆರ್ಥಿಕ ಹೊರೆಯಾಗುತ್ತಿದೆ.

ಇದಕ್ಕೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಉತ್ತರ ಪ್ರದೇಶದಲ್ಲಿನ ಝೂಗಳಲ್ಲಿರುವ ಮಾಂಸಹಾರಿ ಪ್ರಾಣಿಗಳಿಗೆ ಪಾಲಕ್ ಪನ್ನೀರ್ ವಿತರಿಸಬೇಕೆಂದು ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದಿಂದ ವಾರ್ಷಿಕ 28,000 ಕೋಟಿ ರೂ.ನಷ್ಟು ಮಾಂಸ ರಫ್ತಾಗುತ್ತದೆ. ಈಗ ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ ಹಾಕಲಾಗಿದೆ.

ಕಡಿಮೆ ಬೆಲೆಯಲ್ಲಿ ಪ್ರಾಣಿ ಸಂಗ್ರಹಾಲಯಗಳಿಗೆ ಪೂರೈಕೆಯಾಗುತ್ತಿದ್ದ ಮಾಂಸ ಸಿಗದಂತಾಗಿದೆ. ಇದರಿಂದ ಪ್ರಾಣಿಗಳಿಗೆ ಬೇರೆ ಮಾಂಸ ರುಚಿಸುತ್ತಿಲ್ಲ.

ಇದಕ್ಕೆ ವ್ಯಂಗ್ಯವಾಡಿರುವ ಅಧೀರ್ ಚೌಧರಿ, ಸಿಂಹಗಳು ಪಾಲಕ್ ಪನ್ನೀರ್ ತಿನ್ನುತ್ತವೆಯೇ ಎಂದು ಪ್ರಶ್ನಿಸಿದ್ದು, ಅವು ತಿನ್ನುವುದಾದಲ್ಲಿ ಇನ್ನು ಮುಂದೆ ಪಾಲಕ್ ಪನ್ನೀರ್ ಅನ್ನು ಝೂಗಳಿಗೆ ಪೂರೈಕೆ ಮಾಡಬೇಕೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...