alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರಿಂದ ಟೀ ಖರೀದಿಸಿದ್ದವರಿಗೆ 2 ಲಕ್ಷ ರೂ..!

modi-45688ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಟೀ ಮಾರಾಟ ಮಾಡುತ್ತಿದ್ದ ವೇಳೆ ಅವರಿಂದ ಟೀ ಖರೀದಿಸಿದವರು ಹಾಗೂ ಅವರೊಂದಿಗೆ ಪದವಿ ವ್ಯಾಸಂಗ ಮಾಡಿದವರು ಯಾರಾದರೂ ಇದ್ದರೆ ಅಂತವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಘೋಷಿಸಿದ್ದಾರೆ.

ಮಹಾರಾಷ್ಟ್ರದ ಯಾವತ್ ಮಲ್ ನ ಆರ್ನಿಯಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರೈತರ ಪ್ರತಿಭಟನೆ ‘ಚಾಯ್ ಕೀ ಚರ್ಚಾ’ ದಲ್ಲಿ ಪಾಲ್ಗೊಂಡು ಮಾತನಾಡಿದ ಎಐಸಿಸಿ ಕಾರ್ಯದರ್ಶಿಯೂ ಆಗಿರುವ ದಿಗ್ವಿಜಯ್ ಸಿಂಗ್, ನರೇಂದ್ರ ಮೋದಿಯವರ ಜೊತೆ ಪದವಿ ವ್ಯಾಸಂಗ ಮಾಡಿದವರು ಮುಂದೆ ಬಂದು ಈ ವಿಷಯ ತಿಳಿಸಿದರೆ ಅವರಿಗೆ ಬಹುಮಾನ ನೀಡುವುದಾಗಿ ಹೇಳಿದರು.

ನರೇಂದ್ರ ಮೋದಿಯವರೇ ಈ ಹಿಂದೆ ತಾವು ಮೆಟ್ರಿಕುಲೇಶನ್ ವ್ಯಾಸಂಗ ಮಾಡಿರುವುದಾಗಿ ತಿಳಿಸಿದ್ದು, ಈಗ ಪದವಿ ಪಡೆದಿರುವುದಾಗಿ ಹೇಳಿಕೊಳ್ಳುತ್ತಿರುವುದಕ್ಕೆ ವ್ಯಂಗ್ಯವಾಡಿದ ದಿಗ್ವಿಜಯ್ ಸಿಂಗ್, ಅವರು ಚಹಾ ಮಾರಾಟ ಮಾಡಿರುವ ವಿಚಾರವೂ ಅನುಮಾನಸ್ಪದವಾಗಿದೆ. ಹಾಗಾಗಿ ಅವರಿಂದ ಚಹ ಖರೀದಿಸಿದ್ದವರು ಇದನ್ನು ದೃಢಪಡಿಸಿದಲ್ಲಿ ಅವರಿಗೂ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...