alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯ ವಿರುದ್ಧವೇ ಕಣಕ್ಕಿಳಿಯಲು ಮಗಳ ಸಿದ್ದತೆ

ರಾಜಕೀಯ ಅನ್ನೋದೇ ಹಾಗೆ. ಕೆಲವೊಮ್ಮೆ ಕುಟುಂಬ ಸದಸ್ಯರ ವಿರುದ್ಧವೇ ಪೈಪೋಟಿ ನಡೆಸಬೇಕಾಗುತ್ತೆ. ಈಗ ಅಂತ ಸಂದರ್ಭ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಸೃಷ್ಟಿಯಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನಗೆ ಆರ್ಜೆಡಿ ಪಕ್ಷದಿಂದ ಟಿಕೆಟ್ ಸಿಕ್ಕರೆ ತಂದೆಯ ವಿರುದ್ಧವೇ ಸ್ಪರ್ಧೆ ಮಾಡೋದಾಗಿ ರಾಮ್ ವಿಲಾಸ್ ಪಾಸ್ವಾನ್ ಪುತ್ರಿ ಆಶಾ ಪವಾರ್ ತಿಳಿಸಿದ್ದಾರೆ.

ರಾಮ ವಿಲಾಸ್ ಪಾಸ್ವಾನ್ ಸದ್ಯ ಬಿಹಾರದ ಹಾಜಿಪುರ್ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ. ರಾಮ್ ವಿಲಾಸ್ ಪಾಸ್ವಾನ್ ಮಗಳಾಗಿದ್ದರೂ ನಾನು ಅವರಿಂದ ಕಡೆಗಣಿಸಲ್ಪಟ್ಟಿದ್ದೀನಿ. ಹಾಗಾಗಿ ಒಂದು ವೇಳೆ ಆರ್ಜೆಡಿ ಪಕ್ಷದಿಂದ ನನಗೆ ಟಿಕೆಟ್ ಸಿಕ್ಕರೆ ನಾನು ಅವರ ವಿರುದ್ಧವೇ ಹಾಜಿಪುರ್ ಕ್ಷೇತ್ರದಿಂದ ಸ್ಪರ್ಧೆಗಿಳಿಯಬಯಸುತ್ತೇನೆ ಎಂದಿದ್ದಾರೆ.

ಆಶಾ ಪವಾರ್ ಗೆ ಪತಿ ಅನಿಲ್ ಸಾಧು ಕೂಡ ಸಾಥ್ ಕೊಟ್ಟಿದ್ದಾರೆ. ನಾನಾದ್ರು ಸರಿ ಅಥವಾ ನನ್ನ ಪತ್ನಿಯಾದರೂ ಸರಿ. ಅವರ ವಿರುದ್ಧ ಸ್ಪರ್ಧೆಗಿಳಿಯಬಯಸುತ್ತೇವೆ ಎಂದಿದ್ದಾರೆ. ಲೋಕ ಜನಶಕ್ತಿ ಪಕ್ಷದ ದಲಿತ ಘಟಕದ ಅಧ್ಯಕ್ಷರಾಗಿದ್ದ ಅನಿಲ್ ಇತ್ತೀಚೆಗಷ್ಟೇ ಎಲ್ಜೆಪಿ ತೊರೆದು ಆರ್ಜೆಡಿಗೆ ಸೇರ್ಪಡೆಯಾಗಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಮೊದಲ ಪತ್ನಿ ರಾಜ್ಕುಮಾರಿ ದೇವಿಯವರ ಮಗಳೇ ಆಶಾ. ಎರಡನೇ ಪತ್ನಿ ರೀನಾ ಪಾಸ್ವಾನ್ ಗೆ ಮಗ ಮತ್ತು ಮಗಳಿದ್ದಾರೆ. ಎರಡನೇ ಪತ್ನಿಯ ಮಗ ಚಿರಾಗ್ ಬಿಹಾರದ ಜಮುಯ್ ನ ಲೋಕಸಭಾ ಸದಸ್ಯರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...