alex Certify
ಕನ್ನಡ ದುನಿಯಾ       Mobile App
       

Kannada Duniya

‘ಗೋವುಗಳನ್ನು ಕೊಂದರೆ ಕೈಕಾಲು ಮುರಿಯುತ್ತೇವೆ’

limbs

ಉತ್ತರಪ್ರದೇಶದ ಬಿಜೆಪಿ ಶಾಸಕ ವಿಕ್ರಂ ಸೈನಿ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ. ಯಾರು ಹಸುಗಳಿಗೆ ಅಗೌರವ ತೋರುತ್ತಾರೋ, ಯಾರು ಗೋವುಗಳನ್ನು ಕೊಲ್ಲುತ್ತಾರೋ ಅಂಥವರ ಕೈ, ಕಾಲು ಮುರಿಯುತ್ತೇವೆ ಅಂತಾ ಹೇಳಿದ್ದಾರೆ. ಖಟೌಲಿ ಕ್ಷೇತ್ರದ ಶಾಸಕರಾಗಿರುವ ವಿಕ್ರಂ, ಸಮಾರಂಭವೊಂದರಲ್ಲಿ ಭಾಷಣ ಮಾಡುತ್ತ ಈ ಹೇಳಿಕೆ ನೀಡಿದ್ದಾರೆ.

ಶಾಸಕ ವಿಕ್ರಂ ಸೈನಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಮುಜಫರ್ ನಗರ ಗಲಭೆ ಸಂದರ್ಭದಲ್ಲಿ ಕೂಡ ಇಂಥದ್ದೇ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಶಾಸಕ ವಿಕ್ರಂ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಾದ್ಯಂತ ಗೋವುಗಳ ಅಕ್ರಮ ಸಾಗಾಣಿಕೆ ಮೇಲೆ ನಿಷೇಧ ಹೇರಿದ್ದಾರೆ.

ಮುಖ್ಯಮಂತ್ರಿಗಳ ಆದೇಶ ವಿರೋಧಿಸಿ ಮಾಂಸ ಮಾರಾಟಗಾರರು ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ. ಇದರ ನಡುವೆಯೇ ಶಾಸಕ ವಿಕ್ರಂ ಸಿಂಗ್ ಗೋವು ಕೊಂದವರ ಮೂಳೆ ಮುರಿಯುವುದಾಗಿ ಎಚ್ಚರಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...