alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷಾಂತ್ಯದೊಳಗೆ 100 ರೈಲ್ವೆ ನಿಲ್ದಾಣಗಳಲ್ಲಿ ಹೈ ಸ್ಪೀಡ್ ವೈಫೈ

OLYMPUS DIGITAL CAMERA

ರೈಲ್ವೆ ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಡಿಸೆಂಬರ್ ಅಂತ್ಯದೊಳಗೆ ರೈಲ್ವೆ ನಿಲ್ದಾಣಗಳಲ್ಲಿ ಯಾವುದೇ ಅಡ್ಡಿಯಿಲ್ಲದೆ ವೈಫೈ ಬಳಕೆ ಮಾಡಬಹುದು. ವರ್ಷಾಂತ್ಯದಲ್ಲಿ ನೂರು ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಹೈ ಸ್ಪೀಡ್ ವೈಫೈ ಬ್ರಾಡ್ ಬ್ಯಾಂಡ್ ಸೌಲಭ್ಯ ಗ್ರಾಹಕರಿಗೆ ತಲುಪಲಿದೆ.

ಈ ಬಗ್ಗೆ ಮಾತನಾಡಿದ ರೈಲ್ವೆ ಸಚಿವ ಸುರೇಶ್ ಪ್ರಭು, ಈಗಾಗಲೇ 50 ರೈಲ್ವೆ ನಿಲ್ದಾಣಗಳಲ್ಲಿ ಹೈಸ್ಪೀಡ್ ವೈಫೈ ಬ್ರಾಡ್ ಬ್ಯಾಂಡ್ ಸರ್ವಿಸ್ ಕಲ್ಪಿಸಲಾಗಿದೆ. 100 ರ ಗುರಿ ಮುಟ್ಟಲು ಇಲಾಖೆ ಪ್ರಯತ್ನ ಮಾಡ್ತಿದೆ. ಡಿಸೆಂಬರ್ ಅಂತ್ಯದೊಳಗೆ ಗುರಿ ಮುಟ್ಟಲಿದ್ದೇವೆ ಎಂದಿದ್ದಾರೆ. ರೈಲ್ವೆ ಹಾಗೂ ಗೂಗಲ್ ಈ ಯೋಜನೆ ಪೂರ್ಣಗೊಳಿಸುವುದರಲ್ಲಿ ನಿರತವಾಗಿದೆ ಎಂದಿದ್ದಾರೆ.

ಗ್ರಾಮೀಣ ಭಾರತದ ಜೊತೆ ಹೊಸ ತಂತ್ರಜ್ಞಾನ ಸೇರ್ಪಡೆ ಕುರಿತು ಕೇಳಿದ ಪ್ರಶ್ನೆಗೆ ಸುರೇಶ್ ಪ್ರಭು ಉತ್ತರ ನೀಡಿದ್ದಾರೆ. ಆಧುನೀಕರಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಗ್ರಾಮೀಣ ಭಾರತವನ್ನು ಸೇರ್ಪಡೆ ಮಾಡುವುದು ಸವಾಲಿನ ಕೆಲಸ. ಆದ್ರೆ ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...