alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಜೇಬಿನಿಂದ ಹಣ ಕದ್ದ ಚಾಲಾಕಿ ಪತ್ನಿ

ಹಿಂದಿನ ಕಾಲದಲ್ಲಿ ಪತಿಯೇ ದೇವರು ಎಂದು ನಂಬಲಾಗ್ತಾಯಿತ್ತು. ಪತಿ ಸೇವೆ ಮಾಡುವಂತೆ ಬಾಲ್ಯದಲ್ಲಿಯೇ ಹೆಣ್ಣು ಮಕ್ಕಳಿಗೆ ಹೇಳಿಕೊಡಲಾಗ್ತಾಯಿತ್ತು. ಪತಿ ಸೇವೆ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತೆ ಅಂತಾ ಅಜ್ಜಿಯಂದಿರು ಹೇಳ್ತಿದ್ರು. ಈಗ ಕಾಲ ಹಾಗಿಲ್ಲ. ಪತಿ-ಪತ್ನಿಯನ್ನು ಸಮನಾಗಿ ನೋಡಲಾಗುತ್ತದೆ.

ವಿಷ್ಯ ಅದಲ್ಲ. ಪತಿ ಸೇವೆ ಹೆಸರಿನಲ್ಲಿ ಪತ್ನಿ ಚಾಲಾಕಿತನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇ, 2018 ರಲ್ಲಿ ಯುಟ್ಯೂಬ್ ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಪತ್ನಿ ಪತಿಯ ಕಾಲನ್ನು ಒತ್ತುತ್ತಿದ್ದಾಳೆ. ಪತಿ ಕಾಲು ಒತ್ತುವ ನೆಪದಲ್ಲಿ ನಿಧಾನವಾಗಿ ಆತನ ಹಿಂಬದಿ ಜೇಬಿಗೆ ಕೈ ಹಾಕ್ತಾಳೆ. ಮೊದಲ ಬಾರಿ ಪತಿಗೆ ಅನುಮಾನ ಬಂದು ತಿರುಗಿ ನೋಡ್ತಾನೆ.

ತಕ್ಷಣ ವರಸೆ ಬದಲಿಸಿ ಕಾಲು ಒತ್ತುವ ಕೆಲಸ ಮುಂದುವರೆಸುವ ಪತ್ನಿ ಮತ್ತೊಮ್ಮೆ ಪತಿಗೆ ಗೊತ್ತಾಗದೆ ಜೇಬಿನಿಂದ ಹಣ ತೆಗೆಯುತ್ತಾಳೆ. ಸೀರೆಯಲ್ಲಿ ಮುಚ್ಚಿಟ್ಟು ಅಲ್ಲಿಂದ ಕಾಲು ಕೀಳುವ ಆಕೆ ವಿಡಿಯೋ ವೈರಲ್ ಆಗಿದೆ. ಚಾಲಾಕಿ ಪತ್ನಿ ಕೆಲಸ ನೋಡಿ ಜನರು ನಗ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...