alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಫೋಟೋ ಕಳುಹಿಸಿದ್ದು ಪತ್ನಿ: ಕೆಲಸ ಕಳೆದುಕೊಂಡ ಪತಿ…!

ಪತ್ನಿ ಮಾಡಿದ ಯಡವಟ್ಟಿಗೆ ಪತಿ ಕೆಲಸ ಕಳೆದುಕೊಂಡ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ. ನಕಲಿ ಫೇಸ್ಬುಕ್ ಅಕೌಂಟ್ ಸಿದ್ಧಪಡಿಸಿದ ಪತ್ನಿ, ಪತಿ ಕಂಪನಿ ಬಾಸ್ ಸೇರಿದಂತೆ ಸಿಬ್ಬಂದಿಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದಾಳೆ. ಪತ್ನಿ ವಿರುದ್ಧ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ಆರೋಪಿ ಎಂಬುದು ತಿಳಿದು ಬಂದಿದೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

2014ರಲ್ಲಿ ಯುವಕ ಗುರ್ಗಾಂವ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. 2011ರಲ್ಲಿಯೇ ಆತನಿಗೆ ಮದುವೆಯಾಗಿತ್ತು. ಮದುವೆಯಾದ ಕೆಲ ವರ್ಷಗಳಲ್ಲಿಯೇ ಪತಿ-ಪತ್ನಿ ದೂರವಾಗಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಪತ್ನಿ ಮಾಡಿದ ಯಡವಟ್ಟಿನಿಂದ ಯುವಕ ಕೆಲಸ ಕಳೆದುಕೊಂಡಿದ್ದಾನೆ.

ಪತಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಸಿದ್ಧಪಡಿಸಿ ಪತ್ನಿ, ಪತಿಯ ಫೋಟೋ ಹಾಕಿದ್ದಾಳೆ. ನಂತ್ರ ಪತಿ ಕಂಪನಿ ಬಾಸ್ ಸೇರಿದಂತೆ ಸಿಬ್ಬಂದಿಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದಾಳೆ. ಇದ್ರಿಂದ ಬೇಸತ್ತ ಕಂಪನಿ, ಯುವಕನನ್ನು ಕೆಲಸದಿಂದ ತೆಗೆದು ಹಾಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...