alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿ ಜೊತೆ ಓಡಿಹೋದ ಪತ್ನಿ ಹಿಂಬಾಲಿಸಿ ಬಂದ ಪತಿ…!

ಉತ್ತರ ಪ್ರದೇಶದ ಫರುಖಾಬಾದ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಪ್ರೇಮಿ ಜೊತೆ ಓಡಿ ಹೋಗ್ತಿದ್ದ ಪತ್ನಿಯನ್ನು ಪತಿ ತಡೆದಿದ್ದಾನೆ. ಈ ವೇಳೆ ಪತ್ನಿ ಮಾಡಿದ ಹೈಡ್ರಾಮಾದಿಂದಾಗಿ ಪತಿ ಸಾರ್ವಜನಿಕರಿಂದ ಒದೆ ತಿನ್ನುವಂತಾಗಿದೆ.

ಆಗ್ರಾದ ನಿವಾಸಿ ಉದಯ್ ಪತ್ನಿ ಕೆಲ ದಿನಗಳ ಹಿಂದೆ ಪ್ರೇಮಿ ಜೊತೆ ಓಡಿ ಹೋಗಿದ್ದಳು. ಆಕೆಯನ್ನು ಪತ್ತೆ ಹಚ್ಚಿದ್ದ ಪತಿ ಫರುಖಾಬಾದ್ ನಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಜೊತೆ ವಾಸ ಶುರುಮಾಡಿದ್ದ. ಆದ್ರೆ ಶುಕ್ರವಾರ ಪತ್ನಿ ಮತ್ತೆ ಮನೆ ಬಿಟ್ಟು ಹೋಗಿದ್ದಾಳೆ.

ಪತ್ನಿ ಹಿಂಬಾಲಿಸಿದ ಪತಿ ರೈಲ್ವೆ ನಿಲ್ದಾಣದಲ್ಲಿ ಆಕೆಯನ್ನು ಹಿಡಿದಿದ್ದಾನೆ. ಮನೆಗೆ ಕರೆದೊಯ್ಯುವ ವೇಳೆ ಪತ್ನಿ ನಾಟಕ ಶುರು ಮಾಡಿದ್ದಾಳೆ. ಪತಿ ಒತ್ತಡ ಹೇರುತ್ತಿದ್ದಾನೆಂದು ಆರೋಪ ಮಾಡಿದ್ದಾಳೆ. ರೈಲ್ವೆ ನಿಲ್ದಾಣದಲ್ಲಿದ್ದ ಜನರೆಲ್ಲ ಪತಿಗೆ ಥಳಿಸಿದ್ದಾರೆ. ನಂತ್ರ ಉದಯ್ ಮಹಿಳೆ ಪತಿ ಎಂಬುದು ಗೊತ್ತಾಗಿದೆ. ಈ ಮಧ್ಯೆ ಅಲ್ಲಿಂದ ಓಡಿ ಹೋದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತ್ರ ಅಲ್ಲಿಗೆ ಬಂದ ಉದಯ್ ಪತ್ನಿ ಬಣ್ಣ ಬಿಚ್ಚಿಟ್ಟಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...