alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ರಿಮೋಟ್ ಕೊಡಲಿಲ್ಲವೆಂಬ ಕಾರಣಕ್ಕೆ ನೇಣು ಬಿಗಿದುಕೊಂಡ ಪತಿ

ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಚಾನೆಲ್ ಬದಲಾಯಿಸಲು ಪತ್ನಿ ರಿಮೋಟ್ ಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಭೂಪಾಲ್ ನಲ್ಲಿ ನಡೆದಿದೆ.

ಭೂಪಾಲ್ ನ ಅಶೋಕ ಗಾರ್ಡನ್ ನಿವಾಸಿ 30 ವರ್ಷದ ಶಂಕರ್ ಸಾವಿಗೀಡಾದ ವ್ಯಕ್ತಿಯಾಗಿದ್ದು, ಸಣ್ಣ ಹೋಟೆಲ್ ನಡೆಸುತ್ತಿದ್ದ ಈತ ಮದ್ಯ ವ್ಯಸನಿಯಾಗಿದ್ದನೆನ್ನಲಾಗಿದೆ. ಶನಿವಾರದಂದು ಮನೆಗೆ ಬಂದ ಈತ, ಕುಟುಂಬ ಸದಸ್ಯರ ಜೊತೆ ಟಿವಿ ವೀಕ್ಷಿಸಲು ಕುಳಿತಿದ್ದಾನೆ.

ಮಧ್ಯೆ ಚಾನೆಲ್ ಬದಲಾಯಿಸಲು ರಿಮೋಟ್ ಕೊಡುವಂತೆ ಪತ್ನಿಗೆ ಕೇಳಿದ್ದು, ಆದರೆ ಅದಾಗಲೇ ಪಾನಮತ್ತನಾಗಿ ಬಂದಿದ್ದ ಕಾರಣ ಹೋಗಿ ಮಲಗುವಂತೆ ಪತ್ನಿ ಹೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಶಂಕರ್ ರೂಮಿಗೆ ಹೋಗಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಕೆಲಕಾಲದ ಬಳಿಕ ಆತನ ಪತ್ನಿ ರೂಮಿಗೆ ಹೋಗಿ ನೋಡಿದ ವೇಳೆ ಶಂಕರ್ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದ್ದು, ಕೂಡಲೇ ಕುಟುಂಬ ಸದಸ್ಯರು ಕೆಳಗಿಳಿಸಿದರಾದರೂ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಶಂಕರ್ ಚಿಕ್ಕಪುಟ್ಟ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...