alex Certify
ಕನ್ನಡ ದುನಿಯಾ       Mobile App
       

Kannada Duniya

ದೇಸಿ ತುಪ್ಪ ಬೆರೆಸಿದ ಹಾಲು ನೀಡಿ ರೋಮ್ಯಾನ್ಸ್ ಮಾಡುವ ಆಸೆ ತೋರಿಸಿದ್ಲು ಪತ್ನಿ..!?

ಮದುವೆ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳ ಹೆಚ್ಚಾಗ್ತಿದೆ. ಉತ್ತರ ಪ್ರದೇಶದಲ್ಲಿ ಈಗ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಗಂಡನಿಗೆ ರೋಮ್ಯಾನ್ಸ್ ಆಸೆ ತೋರಿಸಿ ಹಾಲು ಕುಡಿಸಿ ಮನೆ ದೋಚಿದ್ದಾಳೆ ಚಾಲಾಕಿ ಹೆಣ್ಣು.

ಮೂರು ತಿಂಗಳ ಹಿಂದೆಯೇ ಸಂಬಂಧ ಗೊತ್ತಾಗಿತ್ತಂತೆ. ಕೆಲ ದಿನ ಹಿಂದಷ್ಟೇ ಮದುವೆ ನಡೆದಿತ್ತಂತೆ. ಮದುವೆಯಾದ ನಾಲ್ಕೈದು ದಿನ ಸರಿಯಾಗಿದ್ದ ಪತ್ನಿ, ಒಂದು ದಿನ ರಾತ್ರಿ ಎರಡು ಕೈನಲ್ಲಿ ಹಾಲಿನ ಗ್ಲಾಸ್ ಹಿಡಿದು ಬಂದಿದ್ದಾಳೆ. ಹಾಲಿಗೆ ದೇಸಿ ತುಪ್ಪ ಹಾಕಿದ್ದೇನೆ. ಹಾಲು ಕುಡಿದು ರೋಮ್ಯಾನ್ಸ್ ಮಾಡೋಣ ಎಂದಿದ್ದಾಳೆ. ನಂಬಿದ ಪತಿ ಹಾಲು ಕುಡಿದಿದ್ದಾನೆ.

ಹಾಲು ಕುಡಿಯುತ್ತಿದ್ದಂತೆ ಪತಿಗೆ ಪ್ರಜ್ಞೆ ತಪ್ಪಿದೆ. ಅಲ್ಲಿದ್ದ ಒಡವೆ, ನಗದನ್ನು ವಧು ದೋಚಿದ್ದಾಳೆ. ಬೆಳಿಗ್ಗೆ ಎಚ್ಚರವಾದ್ರೂ ತಲೆ ಸುತ್ತಿ ಮತ್ತೆ ಬಿದ್ದಿದ್ದಾನೆ ವರ. ಸ್ಥಳಕ್ಕೆ ಬಂದ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಡೋಸ್ ನಶೆ ಔಷಧಿ ದೇಹದೊಳಗೆ ಹೋಗಿದ್ದರಿಂದ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯುವತಿ ಹುಡುಕಾಟ ಶುರುವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...