alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆಗೊಳಗಾದ ನಿವೃತ್ತ ನ್ಯಾಯಾಧೀಶರ ಪತ್ನಿ-ಪುತ್ರಿ

ನವದೆಹಲಿ: ನಿವೃತ್ತ ನ್ಯಾಯಮೂರ್ತಿಯವರ ಪತ್ನಿ ಮತ್ತು ಮಗಳು ಮನೆ ಸೇವಕನಿಂದಲೇ ದರೋಡೆಗೊಳಗಾದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಅವರ ಮನೆಯಲ್ಲಿಯೇ ತಡ ರಾತ್ರಿ ಈ ಘಟನೆ ನಡೆದಿದ್ದು, ನಾಲ್ಕು ದಿನಗಳ ಹಿಂದಷ್ಟೆ ಕೆಲಸಕ್ಕೆ ಸೇರಿದ ವ್ಯಕ್ತಿ, ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ನಗದು ದೋಚಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದಾಗ ಪುತ್ರಿ ತಲೆಗೆ ರಾಡ್ ನಿಂದ ಹೊಡೆಯಲ್ಪಟ್ಟಿದ್ದು, ಗಾಯಗಳಾಗಿದೆ. ಆಕೆ ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿಯಾಗಿದ್ದ ದಲೀಪ್ ಕುಮಾರ್ ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದು, ಅವರ ಪತ್ನಿ (78) ಹಾಗೂ ಪುತ್ರಿ (45) ಒಟ್ಟಿಗೆ ವಾಸವಾಗಿದ್ದರೆ. ನಾಲ್ಕು ದಿನದ ಹಿಂದಷ್ಟೆ ಅವರು ಒಬ್ಬ ಸೇವಕನನ್ನು ಕೆಲಸಕ್ಕೆಂದು ನೇಮಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...