alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಜೊತೆ ಸೇರಿ ಪತಿಗೆ ಒದೆ ನೀಡಿದ್ಲು ಪತ್ನಿ

ಮಹಿಳೆಯೊಬ್ಬಳು ಮಕ್ಕಳ ಜೊತೆ ಸೇರಿ ಪತಿ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ಘಟನೆ ರಾಜಸ್ತಾನದ  ಜೋಧಪುರದ ಚಿಲಾ ಗ್ರಾಮದಲ್ಲಿ ನಡೆದಿದೆ. ಯಾವುದೇ ದೂರು ದಾಖಲಿಸಿಕೊಳ್ಳದ ಪೊಲೀಸರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ.

ಕುಟುಂಬದ ವಿವಾದ ಗಲಾಟೆಗೆ ತಿರುಗಿದೆ. ಮಹಿಳೆ ಕೋಲು ಹಿಡಿದು ಪತಿಗೆ ಮನಸ್ಸಿಗೆ ಬಂದಂತೆ ಥಳಿಸಿದ್ದಾಳೆ. ಮಕ್ಕಳಿಬ್ಬರು ತಂದೆಯನ್ನು ಹಿಡಿದುಕೊಂಡಿದ್ದಾರೆ. ಪೀಡಿತ ವ್ಯಕ್ತಿ ಕೂಗಿಕೊಂಡ್ರೂ ಪತ್ನಿ ಮನಸ್ಸು ಕರಗಲಿಲ್ಲ. ದುರಾದೃಷ್ಟವೆಂದ್ರೆ ಪೀಡಿತನನ್ನು ರಕ್ಷಿಸುವ ಬದಲು ಸಹೋದರ ವಿಡಿಯೋ ಮಾಡಿದ್ದಾನೆ.

ನಂತ್ರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ಎರಡೂ ಕಡೆಯವರನ್ನು ಕರೆಯಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...