alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ಫ್ರೆಂಡ್ ಜೊತೆ ಪಾರ್ಕ್ ನಲ್ಲಿದ್ದ ಪತಿಗೆ ಪತ್ನಿ ಮಾಡಿದ್ಲು..!

lovers-point_1486719046

ಭಾನುವಾರ ಗರ್ಲ್ ಫ್ರೆಂಡ್ ಜೊತೆ ಕಾಲಕಳೆಯುವ ಕನಸು ಕಂಡಿದ್ದ ಪತಿ. ಲಕ್ನೋದ ಜನೇಶ್ವರ್ ಮಿಶ್ರಾ ಪಾರ್ಕ್ ಗೆ ಗೆಳತಿ ಜೊತೆ ಹೋಗಿದ್ದಾನೆ. ಮನೆಗೆ ಬಾರದ ಪತಿಯನ್ನು ಹುಡುಕುತ್ತ ಬಂದ ಪತ್ನಿ ಕಣ್ಣಿಗೆ ಈ ದೃಶ್ಯ ಕಂಡಿದೆ. ಕೋಪಗೊಂಡ ಪತ್ನಿ ಹೆಮ್ಮಾರಿಯಾಗಿ ಪತಿಗೆ ಧರ್ಮದೇಟು ನೀಡಲು ಶುರುಮಾಡಿದ್ದಾಳೆ.

ಬಾಯ್ ಫ್ರೆಂಡ್ ಗೆ ಹೊಡೆತ ಬೀಳ್ತಾ ಇದ್ದಂತೆ ಗರ್ಲ್ ಫ್ರೆಂಡ್ ಅಲ್ಲಿಂದ ಕಾಲ್ಕೀಳುವ ಪ್ರಯತ್ನ ಮಾಡಿದ್ದಾಳೆ. ಆದ್ರೆ ಆಕೆ ಪ್ರಯತ್ನ ಯಶ ಕಾಣಲಿಲ್ಲ. ಬಾಯ್ ಫ್ರೆಂಡ್ ಪತ್ನಿ ಕೈಗೆ ಸಿಕ್ಕಿಬಿದ್ದು ಆಕೆಯೂ ಏಟು ತಿಂದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ಮಾತುಕತೆ ನಡೆಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, ಕಾನ್ಪುರ ಮೂಲದ ಪುರುಷ ಲಕ್ನೋದಲ್ಲಿ ಕೆಲಸ ಮಾಡ್ತಾನೆ. ಪತ್ನಿ ಪ್ರಕಾರ ಪ್ರತಿ ಶನಿವಾರ ಪತಿ ಕಾನ್ಪುರಕ್ಕೆ ಬರ್ತಾ ಇದ್ದ. ಆದ್ರೆ ಕೆಲ ತಿಂಗಳುಗಳಿಂದ ಶನಿವಾರ ಕಾನ್ಪುರಕ್ಕೆ ಬರೋದನ್ನು ನಿಲ್ಲಿಸಿದ್ದ. ಹಾಗಾಗಿ ಪತ್ನಿಯೇ ತನ್ನ ಮೈದುನ ಹಾಗೂ ಮಕ್ಕಳ ಜೊತೆ ಗಂಡನ ಹುಡುಕಾಟ ನಡೆಸಿದ್ಲು. ಈ ವೇಳೆ ಪರಸ್ತ್ರೀ ಜೊತೆ ಪತಿಯನ್ನು ನೋಡಿ ದಂಗಾಗಿದ್ದಾಳೆ. ಪತಿ ಜೊತೆ ಗಲಾಟೆ ಶುರುಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...