alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಪತ್ನಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ ಫೇಸ್ಬುಕ್ ಗೆ ಹಾಕಿದ ಪತಿ

ಮದುವೆಯ ಮೊದಲ ರಾತ್ರಿ ಪತಿಯೊಬ್ಬ ವಿಚಿತ್ರವಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದಿರುವುದು ಮೀರತ್ ನಲ್ಲಿ. ಮೊದಲ ರಾತ್ರಿ ಪತ್ನಿ ಅಶ್ಲೀಲ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡಿದ್ದಲ್ಲದೆ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ ಪತಿ.

ಎರಡು ತಿಂಗಳ ಹಿಂದೆ ಪೀಡಿತೆಯ ಮದುವೆ ನಡೆದಿತ್ತಂತೆ. ಮದುವೆ ದಿನವೇ ಪತಿ ವರದಕ್ಷಿಣೆಗೆ ಒತ್ತಡ ಹೇರಿದ್ದನಂತೆ. ಪತ್ನಿ ಕಡೆಯವರು ಹಣ ನೀಡಲಿಲ್ಲವಂತೆ. ಮೊದಲ ರಾತ್ರಿ ಕಿಟಕಿ ಬಳಿ ಮೊಬೈಲ್ ಇಟ್ಟು ಪತ್ನಿ ಅಶ್ಲೀಲ ಫೋಟೋ ತೆಗೆದಿದ್ದ ಪತಿ ಮರುದಿನ ಧಮಕಿ ಹಾಕಿದ್ದಾನೆ. ಗಂಡನ ಮನೆಯವರ ಕಿರುಕುಳ ತಾಳಲಾರದೆ ಪತ್ನಿ ತವರಿಗೆ ಹೋಗಿದ್ದಾಳೆ.

ತಿಂಗಳಾದ್ರೂ ಪತಿ ಕಡೆಯಿಂದ ಪ್ರತಿಕ್ರಿಯೆ ಬರದ ಕಾರಣ ಮಹಿಳೆ ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್ ಮೊರೆ ಹೋಗಿದ್ದಾಳೆ.ಈ ಸಂಗತಿ ತಿಳಿದ ಪತಿ, ಪತ್ನಿಯ ಅಶ್ಲೀಲ ಫೋಟೋವನ್ನು ಫೇಸ್ಬುಕ್ ಗೆ ಹಾಕಿದ್ದಾನೆ. ನೊಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಿಚಾರಣೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...