alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಮರು ಮದುವೆಯಾಗಿದ್ದರೂ ಪಿಂಚಣಿಗೆ ಅರ್ಹ

ಸರಕಾರಿ ಕೆಲಸದಲ್ಲಿರುವಾಗಲೇ ಪತಿ ಮೃತರಾಗಿ, ಹೆಂಡತಿ‌ ಮರು ಮದುವೆಯಾಗಿದ್ದರೂ ಮೊದಲ‌ ಪತಿಯ ಪಿಂಚಣಿ ನೀಡಬೇಕು ಎಂದು ಸಿಎಟಿ ಆದೇಶ ನೀಡಿದೆ.

ರಕ್ಷಣಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಾಗ ಮೃತರಾದ ಪವನ್ ಕುಮಾರ್ ಗುಪ್ತಾ ಅವರ ಪತ್ನಿ ರೇಣು ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪ್ರವೀಣ್ ಮಹಾಜನ್ ಅವರ ಪೀಠ ಈ ಆದೇಶ ನೀಡಿದೆ‌.

ರೇಣು ಗುಪ್ತಾ ಅವರು ಮೊದಲ ಪತಿ ಮೃತರಾದ ಬಳಿಕ, ಅವರಿಗೆ ರಕ್ಷಣಾ ಇಲಾಖೆಯಲ್ಲಿ ಕೆಲಸ ನೀಡುವುದರೊಂದಿಗೆ ಪಿಂಚಣಿ ಹಣ ನಿಗದಿಯಾಯಿತು. ಆದರೆ ತಮಗೆ ಬರುವ ಪಿಂಚಣಿಯನ್ನು ಪುತ್ರನಿಗೆ ನೀಡಬೇಕು ಎಂದು ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದರು. ಆದರೆ 2013ರಲ್ಲಿ ಪಿಂಚಣಿ ಸೌಲಭ್ಯ ವಾಪಾಸು ತಮಗೆ ನೀಡಬೇಕು ಎಂದಾಗ, ಅವರಿಗೆ ಮರು ಮದುವೆಯಾಗಿದ್ದರಿಂದ ನಿರಾಕರಿಸಲಾಗಿತ್ತು.

ಇದನ್ನು ಪ್ರಶ್ನಿಸಿ, ಸಿಎಟಿಗೆ ಅರ್ಜಿ ಸಲ್ಲಿಸಿದ್ದರಿಂದ, ಅರ್ಜಿ ವಿಚಾರಣೆ ನಡೆಸಿದ ಸಿಎಟಿ, ರೇಣು ಅವರು ಮನವಿ ಮಾಡಿದಂತೆ ಪಿಂಚಣಿ ಹಣ ನೀಡಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...