alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಕಾರ್ಡ್ ಬಳಕೆದಾರರು ಓದಲೇಬೇಕಾದ ಸುದ್ದಿ

24atm_1456212481_725x725

ಇಂದು ಬಹುತೇಕರು ಎಟಿಎಂ ಕಾರ್ಡ್ ಬಳಕೆ ಮಾಡುತ್ತಾರೆ. ಬ್ಯಾಂಕಿಗೆ ತೆರಳಿ ಕಾಯುವ ಜಂಜಾಟವಿಲ್ಲದೇ ಬೇಕೆಂದಾಗ ಹಣ ಪಡೆಯುವ ಸೌಲಭ್ಯವಿರುವ ಕಾರಣ ಎಟಿಎಂ ಬಳಕೆ ಇಂದು ಹೆಚ್ಚಾಗಿದೆ.

ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ನಂತರ ಬರುವ ಸ್ಲಿಪ್ ಅನ್ನು ಸಾಮಾನ್ಯವಾಗಿ ಅಲ್ಲಿರುವ ಕಸದ ಬುಟ್ಟಿಗೆ ಬಿಸಾಡುವವರೇ ಹೆಚ್ಚು. ಆದರೆ ಹೀಗೆ ಮಾಡುವ ಬದಲು ಅದನ್ನು ಕೆಲ ದಿನಗಳ ಕಾಲವಾದರೂ ಜೋಪಾನವಾಗಿ ಇಟ್ಟುಕೊಂಡರೆ ಒಳಿತು.

ಎಟಿಎಂ ವ್ಯವಹಾರ ಸಾಫ್ಟ್ ವೇರ್ ಮೂಲಕ ನಿರ್ವಹಿಸುವ ಕಾರಣ ಕೆಲವೊಮ್ಮೆ ತಾಂತ್ರಿಕ ದೋಷದಿಂದ ನಿಮ್ಮ ಖಾತೆಯ ಹಣದಲ್ಲಿ ವ್ಯತ್ಯಾಸವಾಗಬಹುದು. ಸ್ಲಿಪ್ ಕಾಯ್ದಿಟ್ಟುಕೊಂಡರೇ ಪಾಸ್ ಬುಕ್ ನಲ್ಲಿ ಎಂಟ್ರಿ ಮಾಡಿಸಲು ಹೋದ ವೇಳೆ ವ್ಯತ್ಯಾಸಗಳಾಗಿದ್ದಲ್ಲಿ ಸರಿಪಡಿಸಿಕೊಳ್ಳಬಹುದು.

ಎಲ್ಲಕ್ಕಿಂತ ಮುಖ್ಯ ಸಂಗತಿಯೆಂದರೆ ಹ್ಯಾಕರ್ ಗಳು ಸ್ಲಿಪ್ ನಲ್ಲಿನ ವಿವರಗಳನ್ನು ಡಿಕೋಡ್ ಮಾಡಿ ಖಾತೆಯಲ್ಲಿನ ಹಣವನ್ನು ಎಗರಿಸುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಸ್ಲಿಪ್ ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ಕಡೆ ಪಕ್ಷ ಅದು ಮತ್ತೊಬ್ಬರಿಗೆ ಸಿಗದಂತೆ ಚೂರು ಚೂರು ಮಾಡಿ ಹರಿದು ಹಾಕುವುದು ಉತ್ತಮ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...