alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್-ಡೀಸೆಲ್‌ ದರ ನಮ್ಮಲ್ಲಿ ಯಾಕಿಷ್ಟು ದುಬಾರಿ ಗೊತ್ತಾ…?

ಇಂಧನ ದರ ಶುಕ್ರವಾರವೂ ದಾಖಲೆ ಮುರಿಯುತ್ತಾ ಮೇಲಕ್ಕೆ ಹೋಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80 ರೂ.ನ ಸನಿಹಕ್ಕೆ ಬಂದಿದ್ದರೆ, ಮುಂಬೈನಲ್ಲಿ 87.39 ರೂ. ಆಗಿದೆ. ನೆರೆಯ ರಾಷ್ಟ್ರಗಳಲ್ಲಿ ಇಲ್ಲದ ಈ ದುಬಾರಿ ಇಂಧನ ಬೆಲೆ ನಮ್ಮಲ್ಲಿ ಮಾತ್ರ ಈ ಮಟ್ಟಿಗೆ ತುಟ್ಟಿಯಾಗಿರುವುದು ಏಕೆ ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ?

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ತೆರಿಗೆಗಳಿಂದಾಗಿ ಬಂಕ್‌ಗಳಲ್ಲಿ ಮಾರುವ ಚಿಲ್ಲರೆ ಮಾರಾಟ ದರವನ್ನು ದುಪ್ಪಟ್ಟುಗೊಳಿಸಿದೆ ಎಂಬ ಸತ್ಯ ನಿಮಗೆ ಗೊತ್ತಾ?

ಶುಕ್ರವಾರದ ಲೆಕ್ಕವೇ ತೆಗೆದುಕೊಂಡರೆ, ಅತಿದೊಡ್ಡ ಆಯಿಲ್ ರಿಟೈಲರ್‌ ಆಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಎಲ್ಲಾ ತೆರಿಗೆಗಳನ್ನು ಹೊರತುಪಡಿಸಿ ತನ್ನ ಡೀಲರ್‌ಗಳಿಗೆ ಮಾರುವ ಬೆಲೆ ಬರೀ 39.21 ರೂ. ಅಷ್ಟೇ. ವ್ಯಾಟ್, ಅಬಕಾರಿ ಸುಂಕ ಎಲ್ಲವೂ ಸೇರಿ ನಾವು ಖರೀದಿಸುವಾಗ ಅದು ಲೀಟರ್‌ಗೆ 80 ರೂ.ನ ಸನಿಹ ಬಂದಿರುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ನಾವು ತೆರುವ ತೆರಿಗೆಗಳ ವಿವರ ಇಲ್ಲಿದೆ ನೋಡಿ.

ಅಬಕಾರಿ ಸುಂಕ
ಸಾಮಾನ್ಯ ಪೆಟ್ರೋಲ್ ಮೇಲೆ ವಿಧಿಸಲಾಗುವ ಅಬಕಾರಿ ಸುಂಕ 19.48 ರೂ., ಬ್ರಾಂಡೆಡ್ ಪೆಟ್ರೋಲ್ ಮೇಲೆ ಇದು 20.66 ರೂ. ಆಗುತ್ತದೆ. ಸಾಮಾನ್ಯ ಡೀಸೆಲ್ ಮೇಲೆ ಅಬಕಾರಿ ಸುಂಕ 15.33 ರೂ. ಇದ್ದರೆ, ಬ್ರಾಂಡೆಡ್ ಡೀಸೆಲ್ ಮೇಲೆ 17.69 ರೂ. ವಿಧಿಸಲಾಗುತ್ತದೆ.

ವ್ಯಾಟ್
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಮಹಾರಾಷ್ಟ್ರ ಸರ್ಕಾರ ಮುಂಬೈ, ಥಾಣೆ ಹಾಗೂ ನವಿ ಮುಂಬೈಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅತ್ಯಧಿಕ ಅಂದರೆ ಕ್ರಮವಾಗಿ ಶೇ.39.12 ಹಾಗೂ ಶೇ.24.78ರಷ್ಟು ವ್ಯಾಟ್ ವಿಧಿಸುತ್ತದೆ. ಪಂಜಾಬ್‌ನಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಶೇ.35.12, ಆಂಧ್ರದಲ್ಲಿ ಶೇ.35.77, ಮಧ್ಯಪ್ರದೇಶದಲ್ಲಿ ಶೇ.35.78 ಹಾಗೂ ಕರ್ನಾಟಕದಲ್ಲಿ ಶೇ.30.28 ರಷ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...