alex Certify
ಕನ್ನಡ ದುನಿಯಾ       Mobile App
       

Kannada Duniya

ಕಳವಾದ ಮೊಬೈಲ್ ಪತ್ತೆ ಮಾಡೋದು ಇನ್ಮುಂದೆ ಕಷ್ಟ!

ಕಳವಾದ ಮೊಬೈಲ್ ಫೋನ್ ಪತ್ತೆ ಮಾಡಲು IMEI ಸಂಖ್ಯೆ ಪೊಲೀಸರಿಗೆ ನೆರವಾಗುತ್ತಿತ್ತು. ಆದ್ರೀಗ ಅದು ಕೂಡ ನಿಷ್ಪ್ರಯೋಜಕವಾಗಿದೆ. IMEI ನಂಬರ್ ಅನ್ನು ಕೂಡ ಬದಲಾಯಿಸಬಲ್ಲ ಡಿವೈಸ್ ಈಗ ಕಳ್ಳರ ಬಳಿ ಇದೆ. ಆ ಡಿವೈಸ್ ಖದೀಮರಿಗೆ ಎಲ್ಲಾ ಕಡೆ ಲಭ್ಯವಾಗ್ತಿದೆ.

IMEI ಅಥವಾ ಇಂಟರ್ ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ 15 ಅಂಕಿಗಳನ್ನು ಹೊಂದಿರುವ ಸಂಖ್ಯೆ. ಎಲ್ಲಾ ಮೊಬೈಲ್ ಗಳಲ್ಲೂ ಇದು ಲಭ್ಯವಿರುತ್ತದೆ. ಆದ್ರೀಗ ಸಂಖ್ಯೆಯನ್ನು ಕೇವಲ 10 ನಿಮಿಷಗಳಲ್ಲಿ ಬದಲಾಯಿಸಬಹುದಾದ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿಯಲಾಗಿದೆ.

ಇದ್ರಿಂದಾಗಿ ಕಳ್ಳರ ಕೆಲಸ ಮತ್ತಷ್ಟು ಈಸಿಯಾಗಿದೆ. ಹಾಗಾಗಿ ಕಳವಾದ ಫೋನ್ ಗಳನ್ನು ಪತ್ತೆ ಮಾಡಲು ಇದ್ದ ಏಕೈಕ ಮಾರ್ಗವೂ ಪೊಲೀಸರ ಪಾಲಿಗೆ ಮುಚ್ಚಿ ಹೋದಂತಾಗಿದೆ. IMEI ನಂಬರ್ ಬದಲಾಯಿಸುವ ಡಿವೈಸ್ ಬೆಲೆ 2000-5000 ರೂಪಾಯಿ. ಅದನ್ನು ಖರೀದಿಸಲು ಸಾಧ್ಯವಾಗದ ಕಳ್ಳರು, 200-500 ರೂ. ಕೊಟ್ಟು ಅಂಗಡಿಯವರಿಂದ್ಲೇ ನಂಬರ್ ಬದಲಾಯಿಸಿಕೊಳ್ತಾರೆ.

ಆದ್ರೆ ಐಫೋನ್ ಗಳ IMEI ಸಂಖ್ಯೆಯನ್ನು ಮಾತ್ರ ಬದಲಾಯಿಸುವುದು ಅಸಾಧ್ಯ. ಯಾಕಂದ್ರೆ ಆ ಡಿವೈಸ್ ಇವುಗಳಲ್ಲಿ ಕೆಲಸ ಮಾಡುವುದಿಲ್ಲ. ಹಾಗಾಗಿಯೇ ಕಳ್ಳರು ಐಫೋನ್ ನ ಬಿಡಿ ಭಾಗಗಳನ್ನು ಮಾರಾಟ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...