alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ದೇಶ ಕಾಯುವ ಯೋಧರ ಪುಟ್ಟ ಮಕ್ಕಳ ಮನ ಕಲಕುವ ಕಥೆ

why-these-girls-come-from-shillong-to-delhi

ಯೋಧ ತಂದೆಯನ್ನು ಕಾಣುವ ಹಂಬಲ ಈ ಕಂದಮ್ಮಗಳನ್ನು 2,500 ಕಿ.ಮೀ. ದೂರ ಕ್ರಮಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಇಂತಹ ಒಂದು ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಿಂದ ಪಾಕಿಸ್ತಾನದ ಗಡಿಯ ತನಕ ಒಟ್ಟು 2,500 ಕಿ.ಮೀ. ದೂರ ಕ್ರಮಿಸಬೇಕಾಗಿದ್ದ ಇಬ್ಬರು ಹೆಣ್ಣುಮಕ್ಕಳು ದೆಹಲಿಗೆ ಬಂದು ಭಾಷೆ ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದಾರೆ. ಈ ಇಬ್ಬರು ಮಕ್ಕಳ ಪೈಕಿ ಒಬ್ಬಳ ತಂದೆ ಪಂಜಾಬ್ ನ ಗಡಿಯಲ್ಲಿ ಕಾರ್ಯನಿರತರಾಗಿದ್ದಾರೆ. ಇನ್ನೊಬ್ಬರು ಛತ್ತೀಸಘಡದ ನಕ್ಸಲ್ ಇಲಾಖೆಯ ಬಿ.ಎಸ್.ಎಫ್. ನಲ್ಲಿದ್ದಾರೆ.

9 ವರ್ಷದ ಅನಿಷಾಳ ತಂದೆ ಸುಭಾಷ್ ಚಂದ್ ಪಂಜಾಬಿನಲ್ಲಿ ಗಡಿ ಕಾಯುತ್ತಿದ್ದರು. ಆದರೆ ಸಧ್ಯಕ್ಕೆ ಅವರನ್ನು ಕಾಶ್ಮೀರಕ್ಕೆ ನೇಮಿಸಲಾಗಿತ್ತು. ಆಗಸ್ಟ್ 4 ರಂದು ತಂದೆಯ ವಿಳಾಸವನ್ನು ಎತ್ತಿಕೊಂಡ ಅನಿಷಾ, ಗೆಳತಿ ಪೆಮಾ ಶೆರಫಾಳೊಂದಿಗೆ ಮನೆ ಬಿಟ್ಟು ಹೊರಟಿದ್ದಾಳೆ.

ಗೌಹಾತಿ ರೈಲು ನಿಲ್ದಾಣದಿಂದ ಯಾವುದೇ ಟಿಕೆಟ್ ಇಲ್ಲದೆಯೇ ಆಗಸ್ಟ್ 6 ರಂದು ದೆಹಲಿಗೆ ಬಂದಿಳಿದ ಇವರಿಗೆ ಮುಂದೆ ಹೋಗುವ ಮಾರ್ಗ ತಿಳಿಯಲಿಲ್ಲ. ಪಾಕಿಸ್ತಾನ ಗಡಿಗೆ ತೆರಳುವ ರೈಲಿನಲ್ಲಿ ಹತ್ತಬೇಕೆಂಬುದು ಇವರಿಬ್ಬರ ಆಸೆಯಾಗಿತ್ತು. ಆದರೆ ಭಾಷೆ ತಿಳಿಯದ ಕಾರಣ ಅದು ಸಾಧ್ಯವಾಗಲಿಲ್ಲ. ಕೊನೆಗೆ ಪೊಲೀಸರ ಕೈಗೆ ಸಿಕ್ಕ ಅನಿಷಾ ಯಾವುದೇ ಕಾರಣಕ್ಕೂ ತಂದೆಯನ್ನು ಕಾಣದೇ ನಾನು ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು.

ಆರ್ ಪಿ ಎಫ್ ಅಧಿಕಾರಿ ಸುನೀಲ್ ಮತ್ತು ನಿತಿನ್ ಮೆಹ್ರಾ ಅವರ ತಂಡ ಸಾವಧಾನವಾಗಿ ಮಕ್ಕಳಿಂದ ಎಲ್ಲ ಮಾಹಿತಿ ಪಡೆಯುವಲ್ಲಿ ಕೊನೆಗೂ ಸಫಲರಾದರು. ನಂತರ ಅವರವರ ತಂದೆಯನ್ನು ಕರೆಸಿ ಅವರಿಗೆ ಒಂದು ತಿಂಗಳ ವಿಶೇಷ ರಜೆಯನ್ನು ಕೂಡ ಘೋಷಿಸಲಾಗಿದೆ. ಈ ಮೂಲಕ “ಎಲ್ಲ ಮಕ್ಕಳು ತಮ್ಮ ತಂದೆಯೊಂದಿಗೆ ಆಡುವಾಗ ನಮಗೂ ತಂದೆಯೊಂದಿಗೆ ಆಡಬೇಕೆನಿಸುತ್ತದೆ” ಎಂಬ ಅವರ ಆಸೆ ಈಡೇರಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...