alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರಿಗಾಗಿ 32 ವರ್ಷಗಳ ಕಾಲ ಕಾದಿದ್ದರಂತೆ ದೇನಾ ಬ್ಯಾಂಕ್ ಸಿಬ್ಬಂದಿ…!

ಶಾಲಾ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಬ್ಯಾಂಕ್‌ ಖಾತೆ ತೆರೆಸಿಕೊಂಡ ಬ್ಯಾಂಕ್‌ ಒಂದು, ಅವರನ್ನು 32 ವರ್ಷದ ಬಳಿಕ ಪತ್ತೆ ಹಚ್ಚಿದೆ. ಇಂಡಿಯನ್‌ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌(ಐಪಿಪಿಬಿ) ಚಾಲನೆ ನೀಡಿದ ಪ್ರಧಾನಿ ಮೋದಿ ಈ ವಿಚಾರವನ್ನು ಸ್ವಾರಸ್ಯಕರವಾಗಿ ತಿಳಿಸಿದ್ದಾರೆ.

ದೇನಾ ಬ್ಯಾಂಕ್‌ನಿಂದ ಶಾಲಾ ಮಕ್ಕಳಿಗೆ ಉಳಿತಾಯಕ್ಕಾಗಿ ಖಾತೆ ತೆರೆಯುವ ಯೋಜನೆ ಜಾರಿಯಲ್ಲಿತ್ತು. ಶಾಲಾ ದಿನಗಳ ನಂತರ ನಾನು ಗ್ರಾಮದಿಂದ ಬೇರೆಡೆಗೆ ಸಾಗಿದೆ. ಗುಜರಾತ್‌ನ ಶಾಸಕನಾದ ಬಳಿಕ ದೇನಾ ಬ್ಯಾಂಕ್‌ ನನ್ನನ್ನು ಪತ್ತೆ ಹಚ್ಚಿ, ಖಾತೆಯ ವ್ಯವಹಾರವನ್ನು ಕೊನೆಗೊಳಿಸಿದೆ. ರಾಜಕೀಯಕ್ಕೆ ಬರುವವರೆಗೆ ಒಂದು ಬ್ಯಾಂಕ್‌ನಲ್ಲಿ ನನ್ನ ವ್ಯವಹಾರಗಳನ್ನು ಕೇಂದ್ರೀಕರಿಸಲು ಸಾಧ್ಯವೇ ಆಗಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಈ ವೇಳೆ ಯೋಜನೆಯ ಜಾರಿಗೊಳಿಸಿದ ಉದ್ಧೇಶವನ್ನು ವಿವರಿಸಿರುವ ಮೋದಿ, ಸಾಮಾನ್ಯ ಜನರಿಗೆ ಹಣಕಾಸಿನ ವಿವಿಧ ಪ್ರಕ್ರಿಯೆ, ಹೂಡಿಕೆ ಇತ್ಯಾದಿಗಳು ಮನೆ ಬಾಗಿಲಿಗೆ ಸಿಗುತ್ತವೆ ಎಂದರು. ಹಿಂದೆ ಕಾಗದಗಳನ್ನು ಮನೆಗಳಿಗೆ ತಲುಪಿಸುತ್ತಿದ್ದ ಅಂಚೆಯಣ್ಣ, ಇನ್ನು ವಿವಿಧ ಬಗೆಯ ಹಣಕಾಸು ಸೇವೆಗಳನ್ನೂ ಮನೆ ಬಾಗಿಲಿಗೆ ತಲುಪಿಸಲಿದ್ದಾನೆ. ಬಿಲ್‌ ಪಾವತಿ, ಸರಕಾರದ ವಿವಿಧ ಯೋಜನೆಗಳ ಹಣಕಾಸು ಪ್ರಕ್ರಿಯೆ, ಇನ್ಶುರೆನ್ಸ್‌, ಹೂಡಿಕೆ ಯೋಜನೆ, ಹಣ ವರ್ಗಾವಣೆ, ಡಿಜಿಟಲ್‌ ಟ್ರಾನ್‌ಸ್ಯಾಕ್ಷನ್‌ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಮನೆ ಬಾಗಿಲಿನಲ್ಲೇ ಪಡೆಯಬಹುದಾಗಿದೆ. ರೈತರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯನ್ನೂ ಈ ಸೌಲಭ್ಯದಡಿ ಜೋಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...