alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಪ್ರತಿಕ್ರಿಯೆ ಕಂಡು ಬೆರಗಾದ ವಿದ್ಯಾರ್ಥಿ…!

ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಕೌನ್ಸಿಲ್ (ಐಎಸ್‌ಸಿ)ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಾಕ್ಷಿ ಪ್ರದ್ಯುಮ್ನ ಬುಧವಾರ ತನ್ನ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆ ನಡೆಯುತ್ತೆ ಅಂದುಕೊಂಡೇ ಇರಲಿಲ್ಲ.

ಎಲ್ಲರೂ ಕಾತರಿಂದ ಕಾದು ನೋಡುವ, ಅಥವಾ ಬಯಸುವ ಆಸೆ, ಪ್ರದ್ಯುಮ್ನನ ಪಾಲಿಗೆ ನನಸಾಗಿ ಬಿಟ್ಟಿದೆ. ವಿಚಾರ ಇಷ್ಟೇ…ಪ್ರಧಾನಿ ಮೋದಿ ಬರೆದ ಎಕ್ಸಾಮ್‌ ವಾರಿಯರ್ಸ್‌ ಪುಸ್ತಕವನ್ನು ಮೆಚ್ಚಿ, ಪ್ರಧಾನಿಗೆ ಇ-ಮೇಲ್‌ ಮೂಲಕ ಕೃತಜ್ಞತೆ ಸಲ್ಲಿಸಿದ್ದ ಪ್ರದ್ಯುಮ್ನನಿಗೆ ಸ್ವತಃ ಪ್ರಧಾನಿ ಟ್ವಿಟರ್‌ ಮೂಲಕ ಉತ್ತರಿಸಿ, ಶುಭ ಹಾರೈಸಿದ್ದಾರೆ. ಮೋದಿ ತನ್ನ ಇ-ಮೇಲ್‌ಗೆ ಈ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಊಹಿಸದ ಯುವಕ, ಮೋದಿ ಪ್ರತಿಕ್ರಿಯೆ ಕಂಡು ಬೆರಗಾಗಿದ್ದಾನೆ.

ಮೋದಿ ಅವರ ಬರವಣಿಗೆ, ಪುಸ್ತಕದಲ್ಲಿ ತನಗೆ ಇಷ್ಟವಾದ ಸಾಲುಗಳನ್ನೂ ಇ-ಮೇಲ್‌ನಲ್ಲಿ ನಮೂದಿಸಿರುವ ಪ್ರದ್ಯುಮ್ನ, ಐಎಸ್‌ಸಿ ಪರೀಕ್ಷೆಯಲ್ಲಿ ತನಗೆ ಉತ್ತಮ ರ‍್ಯಾಂಕ್‌ ಬಂದಿರುವುದಾಗಿಯೂ ತಿಳಿಸಿದ್ದ. ಇಂತಹ ಉತ್ತಮ ಪುಸ್ತಕ ಬರೆದಿರುವುದಕ್ಕೆ ಅಭಿನಂದನೆ, ಕೃತಜ್ಞತೆಯನ್ನೂ ಹೇಳಿದ್ದಾನೆ. ಸಾಕ್ಷಿಯ ಈ ಮೇಲ್‌ ಹಾಗೂ ಪತ್ರವನ್ನು ಪ್ರಧಾನಿ ಟ್ವಿಟರ್‌ನಲ್ಲಿ ಶೇರ್‌ ಮಾಡುವ ಮೂಲಕ, ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಮಕ್ಕಳೂ ಪ್ರಧಾನಿಗೆ ಇ-ಮೇಲ್‌ ಮಾಡುತ್ತಾರೆ ಎಂಬುದನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಟ್ವಿಟರ್‌ನಲ್ಲಿ ಈ ವಿಚಾರವನ್ನು ಮೋದಿ ಶೇರ್‌ ಮಾಡಿದ್ದಾರಂತೆ. ತಮಗೆ ಇ-ಮೇಲ್‌ ಮಾಡಿರುವುದು, ಉತ್ತಮ ಅಂಕ ಗಳಿಸಿರುವುದಕ್ಕೆ ಪ್ರದ್ಯುಮ್ನನಿಗೆ ಅಭಿನಂದನೆ ಸಲ್ಲಿಸಿರುವ ಮೋದಿ, ಪುಸ್ತಕದಿಂದ ಒಳಿತಾಗಿರುವುದನ್ನು ಕೇಳಿ ಸಂತೋಷವಾಗಿದೆ ಎಂದೂ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...