alex Certify
ಕನ್ನಡ ದುನಿಯಾ       Mobile App
       

Kannada Duniya

‘ವಾರಣಸಿಗೂ ಹೋಗ್ತೀರಿ, ಮಸೀದಿಗೂ ಭೇಟಿ ಕೊಡ್ತೀರಿ, ರಾಮಮಂದಿರ ಯಾವಾಗ ನಿರ್ಮಿಸುತ್ತೀರಿ…?’

ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನೆ ಮತ್ತೆ ವಾಗ್ದಾಳಿ ನಡೆಸಿದೆ.

ಈ ಸಂಬಂಧ ತನ್ನ ಮುಖವಾಣಿ ಸಾಮ್ನಾದಲ್ಲಿ ಮುಖಪುಟ ಲೇಖನ ಪ್ರಕಟಿಸಿರುವ ಶಿವಸೇನೆ ಜಗತ್ತೆಲ್ಲ ಸುತ್ತುವ, ಕೇದಾರನಾಥಕ್ಕೆ ಮೂರು ಬಾರಿ ಭೇಟಿ ನೀಡಿರುವ ಪ್ರಧಾನಿ ಅಯೋಧ್ಯೆಗೆ ಮಾತ್ರ ಯಾಕೆ ಈವರೆಗೆ ಭೇಟಿ ನೀಡುವ ಮನಸ್ಸು ಮಾಡಿಲ್ಲ? ಎಂದು ಕಿಡಿಕಾರಿದೆ.

ಮೋದಿ ಅವರು ಕೇದಾರನಾಥಕ್ಕೆ ಮೂರು ಬಾರಿ, ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಅನೇಕ ಬಾರಿ ಹೋಗಿ ಬಂದು ಹೋಗಿದ್ದಾರೆ. ಅಲ್ಲದೆ, ವಿದೇಶಿ ಪ್ರವಾಸದ ವೇಳೆ ಮಸೀದಿಗಳಿಗೂ ಭೇಟಿ ಕೊಟ್ಟಿದ್ದಾರೆ. ಇಷ್ಟಾದರೂ ಅವ್ರು ರಾಮನ ಜನ್ಮ ಭೂಮಿ ಅಯೋಧ್ಯೆಗೆ ಮಾತ್ರ ಒಂದೇ ಒಂದು ಬಾರಿ ಭೇಟಿ ನೀಡಿಲ್ಲ. ಇದು ಅಯೋಧ್ಯೆಯ ಜನರಲ್ಲಿ ಅಚ್ಚರಿಯ ಪ್ರಶ್ನೆಯಾಗಿ ಕಾಡುತ್ತಿದೆ.

ಕಳೆದ ಲೋಕಸಭಾ ಚುನಾವಣೆಯನ್ನು ಮೋದಿ ಅವರು ರಾಮನ ಹೆಸರಲ್ಲೇ ಗೆದ್ದಿದ್ದರು, ನಂತರ ಪ್ರಧಾನಿಯೂ ಆದರು. ಆದರೂ ಅವರು ಅಯೋಧ್ಯೆಗೆ ಭೇಟಿ ಕೊಟ್ಟಿಲ್ಲ. ಪ್ರಧಾನಿಯವರೇನಾದರೂ ಅಯೋಧ್ಯೆ ಹಾಗೂ ರಾಮನನ್ನು ಮರೆತು ಬಿಟ್ಟರೇ? ಎಂದು ಮೋದಿ ಅವರ ಕಾಲೆಳೆದಿದೆ ಶಿವಸೇನೆ.

ರಾಮ ಮಂದಿರ ನಿರ್ಮಾಣ ವಿಳಂಬ ಕುರಿತು ಕೇಂದ್ರ ಸರಕಾರವನ್ನೂ ಪ್ರಶ್ನಿಸಿರುವ ಶಿವಸೇನೆ, ಸೌದಿ ಅರೇಬಿಯಾದಲ್ಲಿ ಮೋದಿ ದೇವಸ್ಥಾನ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಭಾರತದಲ್ಲಿ ರಾಮಮಂದಿರ ಯಾವಾಗ ನಿರ್ಮಾಣ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...