alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿವಾಲ್ ಗೆ ಶೂ ಖರೀದಿಸಲು ಉದ್ಯಮಿಯಿಂದ ಬಂತು ಹಣ

kejriwal_TuHIlC0

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾಮಾನ್ಯರಂತೆ ಇರಲು ಇಷ್ಟಪಡ್ತಾರೆ. ಹಾಗಾಗಿ ಚಪ್ಪಲಿಯನ್ನು ಕೂಡ ಸಾಮಾನ್ಯರಂತೆ ಧರಿಸ್ತಾರೆ. ಆದ್ರೆ ವಿಶಾಖಪಟ್ಟಣದ ಉದ್ಯಮಿ ಸುಮಿತ್ ಅಗರ್ವಾಲ್ ಗೆ ಇದು ಸರಿ ಕಾಣಲಿಲ್ಲವಂತೆ. ಹಾಗಾಗಿ ಅರವಿಂದ್ ಕೇಜ್ರಿವಾಲ್ ಗೆ ಶೂ ಖರೀದಿಸಲು ಹಣ ಕಳುಹಿಸಿದ್ದಾರೆ.

ವರದಿಯೊಂದರ ಪ್ರಕಾರ ಅಗರ್ವಾಲ್ ಪತ್ರದ ಜೊತೆ 364 ರೂಪಾಯಿ ಡಿಡಿ ಮಾಡಿದ್ದಾರೆ ಎನ್ನಲಾಗಿದೆ. ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಅಲ್ಲಿಗೆ ಕೇಜ್ರಿವಾಲ್ ಚಪ್ಪಲಿ ಧರಿಸಿ ಬಂದಿದ್ದರು. ಇದು ಅಗರ್ವಾಲ್ ಗೆ ಸರಿ ಕಾಣಲಿಲ್ಲವಂತೆ. ಹಾಗಾಗಿ ಶೂ ಖರೀದಿಸಲು ಹಣ ಕಳುಹಿಸಿದ್ದಾರೆ. ಜೊತೆಗೆ ಪತ್ರದಲ್ಲಿ ಸಿಎಂಗೆ ಸಲಹೆ ಕೂಡ ನೀಡಿದ್ದಾರೆ. ದಯವಿಟ್ಟು ದೇಶದ ಗೌರವವನ್ನು ಕಳೆಯಬೇಡಿ ಎಂದಿದ್ದಾರೆ.

ಸಿಎಂ ಗೆ 2 ಲಕ್ಷ ಸಂಬಳ ಬರುತ್ತದೆ. ಹಾಗಿದ್ದೂ ಚಪ್ಪಲಿ ಧರಿಸಿ ಬಂದಿದ್ದಾರೆ. ಇದು ಸಾಮಾನ್ಯರ ಪಾರ್ಟಿಯಲ್ಲ. ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟ. ಅದಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ ಎಂದು ಅಗರ್ವಾಲ್ ಪತ್ರದಲ್ಲಿ ಹೇಳಿದ್ದಾರೆ. ಇಷ್ಟೇ ಅಲ್ಲ, ಈ ವಾರಾಂತ್ಯದಲ್ಲಿ ಇಂಟರ್ನ್ಯಾಷನಲ್ ಫ್ಲೀಟ್ ರಿವ್ಯೂ ಕಾರ್ಯಕ್ರಮವಿದೆ. ಅದಕ್ಕೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಈ ವೇಳೆ ನಿಮಗೂ ಆಮಂತ್ರಣ ಬರಬಹುದು. ಅಲ್ಲಿಗೆ ಚಪ್ಪಲಿ ಧರಿಸಿ ಬರಬೇಡಿ. ಅದಕ್ಕಾಗಿ ಹಣ ಕಳುಹಿಸುತ್ತಿದ್ದೇನೆ. ಕಡಿಮೆಯಾದಲ್ಲಿ ನನಗೆ ತಿಳಿಸಿ. ಇನ್ನಷ್ಟು ಹಣ ಕಳುಹಿಸುತ್ತೇನೆ. ಮುಂದೆಂದೂ ದೇಶದ ಗೌರವಕ್ಕೆ ಧಕ್ಕೆ ತರುವ ರೀತಿ ನಡೆದುಕೊಳ್ಳಬೇಡಿ ಎಂದು ಸುದೀರ್ಘ ಪತ್ರ ಬರೆದಿದ್ದಾರೆ ಅಗರ್ವಾಲ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...