alex Certify
ಕನ್ನಡ ದುನಿಯಾ       Mobile App
       

Kannada Duniya

ಕರುಣಾನಿಧಿ ಅಂತ್ಯಕ್ರಿಯೆ ಮರೀನಾ ಬೀಚ್ ನಲ್ಲೇ ನಡೆದಿದ್ದಕ್ಕೆ ಇದೇ ಕಾರಣ….

ತಮಿಳುನಾಡಿನ ಕಲೈಜ್ಞರ್ ಕರುಣಾನಿಧಿಯವರ ಅಂತ್ಯಕ್ರಿಯೆ ಸಾವಿರಾರು ಅಭಿಮಾನಿಗಳ ಅಶ್ರುತರ್ಪಣದ ನಡುವೆ ನಡೆದಿದೆ. 94ವರ್ಷದ ತಮಿಳುನಾಡಿನ ವರ್ಣರಂಜಿತ ರಾಜಕಾರಣಿ ಮರೀನಾ ಬೀಚ್ ನಲ್ಲೇ ಮಣ್ಣು ಸೇರಿದ್ದಾರೆ. ಕರುಣಾನಿಧಿಯವರ ಅಂತ್ಯಕ್ರಿಯೆಗೆ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ ಗಾಂಧಿ ಮಂಟಪಂನಲ್ಲಿ ಸ್ಥಳಾವಕಾಶ ನೀಡಿದ್ದರೂ, ಡಿಎಂಕೆ ಪಕ್ಷದ ನಾಯಕರು ಮಾತ್ರ ಮರೀನಾ ಬೀಚ್ ನಲ್ಲೇ ಕರುಣಾ ಸಮಾಧಿ ನಿರ್ಮಾಣವಾಗಬೇಕು ಅಂತ ಪಟ್ಟು ಹಿಡಿದರು.

ಕರುಣಾ ಅಂತ್ಯ ಸಂಸ್ಕಾರದ ಸ್ಥಳದ ವಿವಾದ ಕೋರ್ಟ್ ಮೆಟ್ಟಿಲೇರಿತು. ಕೊನೆಗೆ ಮರೀನಾ ಬೀಚ್ ನಲ್ಲೇ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ನ್ಯಾಯಾಲಯ ಅವಕಾಶ ನೀಡಿತು. ಅಷ್ಟಕ್ಕೂ ಡಿಎಂಕೆ ಪಕ್ಷ ಮರೀನಾ ಬೀಚ್ ನಲ್ಲೇ ಕರುಣಾ ಅಂತಿಮ ಸ್ಮಾರಕ ನಿರ್ಮಾಣವಾಗಬೇಕು ಅಂತ ಪಟ್ಟು ಹಿಡಿದಿದ್ದಕ್ಕೂ ಕಾರಣ ಇದೆ.

ಮರೀನಾ ಬೀಚ್ ಚೆನ್ನೈನ ಒಂದು ಪ್ರವಾಸಿ ಸ್ಥಳ ಮಾತ್ರವಲ್ಲ. ತಮಿಳುನಾಡು ರಾಜಕಾರಣದ ಮಹಾನಾಯಕರ ಅಂತಿಮ ನಿಲ್ದಾಣ ಎಂಬಂತೆ ಇಡೀ ತಮಿಳುನಾಡು ನಂಬಿದೆ. ಏಕಂದ್ರೆ ಮರೀನಾ ಬೀಚ್ ನಲ್ಲಿ ಎಂಜಿಆರ್, ಜಯಲಲಿತಾ ಅವರ ಸಮಾಧಿಯ ಜೊತೆಗೆ ಡಿಎಂಕೆ ಪಕ್ಷದ ಸ್ಥಾಪಕ ಮತ್ತು ಕರುಣಾನಿಧಿಯವರ ರಾಜಕೀಯ ಗುರುವಾಗಿರುವ ಅಣ್ಣಾ ದೊರೈ ಅವರ ಸಮಾಧಿಯೂ ಇದೆ. ಅದೇ ಕಾರಣಕ್ಕೆ ಡಿಎಂಕೆ ನಾಯಕರು ಕರುಣಾನಿಧಿ ಅವರ ಸಮಾಧಿ ಮರೀನಾ ಬೀಚ್ ನಲ್ಲಿ ಅಣ್ಣಾ ದೊರೈ ಅವರ ಸಮಾಧಿ ಪಕ್ಕದಲ್ಲೇ ಆಗಬೇಕು ಅಂತ ಪಟ್ಟು ಹಿಡಿಯಿತು. ತಮಿಳುನಾಡಿನ ಅಗ್ರಪಂಕ್ತಿಯ ನಾಯಕರ ಸಾಲಿನಲ್ಲಿ ಕರುಣಾನಿಧಿಯವರ ಪಾತ್ರವೂ ಹಿರಿದು.

60ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಕರುಣಾನಿಧಿಯವರು ದೇಶದ ಮೊದಲ ಪ್ರಧಾನಿ ನೆಹರು ಅವರಿಂದ ಹಿಡಿದು ಮೋದಿಯವರೆಗಿನ 14ಮಂದಿ ಪ್ರಧಾನಿಗಳನ್ನ ಕಂಡಿದ್ದಾರೆ. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಹಾಗಾಗಿಯೇ ಅಣ್ಣಾದೊರೈ ಅವರ ಸಮಾಧಿಯ ಪಕ್ಕದಲ್ಲೇ ಕರುಣಾನಿಧಿಯವರ ಅಂತಿಮ ಸ್ಮಾರಕಕ್ಕೂ ಸ್ಥಳಾವಕಾಶ ಕಲ್ಪಿಸಲಾಗಿದೆ. ಕರುಣಾನಿಧಿಯವರನ್ನ ಮಣ್ಣಿಗಿಟ್ಟ ನಂತರದಲ್ಲಿ ತಮಿಳುನಾಡಿನ ಮೂವರು ಮಾಜಿ ಮುಖ್ಯಮಂತ್ರಿಗಳ ಅಂತಿಮ ಸ್ಥಳ ಮತ್ತಷ್ಟು ರಾಜಕೀಯ ಮಹತ್ವವನ್ನು ಪಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...