alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪು ವಿಡಿಯೋ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಹಿರಿಯ ನಟಿ

ಹಿರಿಯ ನಟಿ ಶಬನಾ ಆಜ್ಮಿ ವಿಡಿಯೋ ಒಂದನ್ನು ಟ್ವೀಟ್ ಮಾಡಿ ಈಗ ಪೇಚಿಗೆ ಸಿಲುಕಿದ್ದಾರೆ. ತಮ್ಮಿಂದಾದ ತಪ್ಪಿಗೆ ಅವರು ಕ್ಷಮೆಯಾಚಿಸಿದ್ದರಾದರೂ ಟ್ರೋಲ್ ಮಾತ್ರ ತಪ್ಪಿಲ್ಲ.

ಅಷ್ಟಕ್ಕೂ ಆಗಿದ್ದೇನೆಂದರೆ ರೈಲ್ವೆ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದ ಶಬನಾ ಆಜ್ಮಿ, ಇದನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ಇಲಾಖೆಯ ಅಧಿಕೃತ ಟ್ವಿಟ್ಟರ್ ಅಕೌಂಟಿಗೆ ಟ್ಯಾಗ್ ಮಾಡಿದ್ದರು.

ವಾಸ್ತವವಾಗಿ ಈ ವಿಡಿಯೋ ಭಾರತದ್ದಲ್ಲ. 30 ಸೆಕೆಂಡ್ ಕಾಲದ ಈ ವಿಡಿಯೋವನ್ನು ಪರಿಶೀಲಿಸಿದ ರೈಲ್ವೆ ಇಲಾಖೆ, ನೀವು ಟ್ಯಾಗ್ ಮಾಡಿರುವ ವಿಡಿಯೋ ಮಲೇಷ್ಯಾ ಉಪಹಾರ ಗೃಹ ಒಂದರ ದೃಶ್ಯ ಎಂದು ತಿಳಿಸಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಶಬನಾ ಆಜ್ಮಿ, ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಟ್ವೀಟ್ ಮಾಡಿದ್ದರು.

ಶಬನಾ ಆಜ್ಮಿ ಕ್ಷಮೆ ಕೇಳಿದರು ಟ್ವಿಟಾರ್ಥಿಗಳು ಮಾತ್ರ ಸುಮ್ಮನಿಲ್ಲ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಎಂದು ರೈಲ್ವೆ ಇಲಾಖೆಗೆ ಹಲವರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಬನಾ ಆಜ್ಮಿ ಪರ-ವಿರೋಧದ ಚರ್ಚೆಗಳೂ ನಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...