alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಲ್ಲಾಪುರದ ಬೀಡಿ ಕಟ್ಟುವ ವಧುಗಳಿಗೆ ಫುಲ್ ಡಿಮ್ಯಾಂಡ್, ಯಾಕೆ ಗೊತ್ತಾ?

18ರ ಹರೆಯದ ರಾಧಾ ಧನವಾಲೆ ಮಹಾರಾಷ್ಟ್ರದ ಸೊಲ್ಲಾಪುರದವಳು. ಇಲ್ಲಿನ ಮೋಸ್ಟ್ ಎಲಿಜೆಬಲ್ ಬ್ರೈಡ್ ಅಂದ್ರೂ ತಪ್ಪಿಲ್ಲ. ಯಾಕಂದ್ರೆ ಪ್ರತಿದಿನ ಇವಳನ್ನು ನೋಡಲು ವರನ ಕುಟುಂಬಗಳು ಬರುತ್ತವೆ. ಅವಳ ಶಿಕ್ಷಣ, ಜಾತಕ ಅಥವಾ ಆಸ್ತಿ ಯಾವುದೂ ವರನ ಕಡೆಯವರನ್ನು ಸೆಳೆಯುತ್ತಿಲ್ಲ.

ಬದಲಾಗಿ ರಾಧಾಗೆ ಇಷ್ಟೊಂದು ಡಿಮ್ಯಾಂಡ್ ಸೃಷ್ಟಿಯಾಗಲು ಕಾರಣ ಬೀಡಿ ಕಾರ್ಡ್. ಚಿಕ್ಕವಳಿದ್ದಾಗಿನಿಂದ್ಲೂ ಆಕೆ ತಾಯಿಯ ಜೊತೆ ಸೇರಿ ಬೀಡಿ ಕಟ್ಟುತ್ತಿದ್ಲು. ಅವಳ ಪ್ರತಿಭೆಯನ್ನು ನೋಡಿ ಫ್ಯಾಕ್ಟರಿಯೊಂದು ಬೀಡಿ ಕಾರ್ಡ್ ಕೊಟ್ಟಿದೆಯಂತೆ.

ಈ ಕಾರ್ಡ್ ಇರೋದ್ರಿಂದ ಜೀವನಪೂರ್ತಿ ಆಕೆ ಕೆಲಸಕ್ಕಾಗಿ ಅಲೆಯಬೇಕಿಲ್ಲ. ಆಕೆಗೆ ನಿಯಮಿತವಾಗಿ ಕೆಲಸ ದೊರೆಯುತ್ತದೆ. ಅದರ ಜೊತೆಗೆ ಪಿಎಫ್, ಬೋನಸ್ ಮತ್ತು ವೈದ್ಯಕೀಯ ಸಹಕಾರ ಕೂಡ ನೀಡಲಾಗುತ್ತದೆ. ಬೀಡಿ ಕಾರ್ಡ್ ಇದ್ರೆ ಸರ್ಕಾರಿ ಕೆಲಸ ಇದ್ದಂತೆ.

ಸುಮಾರು ಒಂದು ಶತಮಾನದಿಂದ್ಲೂ ಸೋಲಾಪುರದ ಮಹಿಳೆಯರು ಬೀಡಿ ಕಟ್ಟುವ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ. ರಾಧಾ ದಿನಕ್ಕೆ 1000 ಬೀಡಿ ಕಟ್ತಾಳೆ, ಸಂಪಾದನೆ ಕೇವಲ 140 ರೂಪಾಯಿ. ಮನೆಯಲ್ಲೇ ಕುಳಿತು ಬೀಡಿ ಕಟ್ಟಿ ಅದನ್ನು ಕಾರ್ಖಾನೆಗೆ ಕೊಟ್ಟು ಬರ್ತಾಳೆ.

ಈ ಬೀಡಿ ಕಾರ್ಡ್ ಇದ್ರೆ ವರದಕ್ಷಿಣೆ ಪಡೆಯದೇ ಯುವತಿಯರನ್ನು ಮದುವೆಯಾಗಲು ಯುವಕರು ಮುಂದೆ ಬರ್ತಾರಂತೆ. ಹಾಗಾಗಿ ರಾಧಾಗೆ ಕೂಡ ಈಗ ಫುಲ್ ಡಿಮ್ಯಾಂಡ್. ಸೂಕ್ತ ವರನನ್ನು ಆಯ್ಕೆ ಮಾಡಿಕೊಂಡು ಹಸೆಮಣೆ ಏರಲು ರಾಧಾ ಸಜ್ಜಾಗಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...