alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಚಿತ್ರವನ್ನು ಭಾರತದಲ್ಲಿ ಬ್ಲೂ ಫಿಲ್ಮ್ ಅಂತಾ ಕರೆಯೋದ್ಯಾಕೆ?

ಪೋರ್ನ್ ಸೈಟ್ ವೀಕ್ಷಣೆಯಲ್ಲಿ ಭಾರತೀಯರೇ ಮುಂದಿದ್ದಾರೆ. ಆದ್ರೆ ಈಗ್ಲೂ ಈ ಬಗ್ಗೆ ಭಾರತೀಯರು ಬಹಿರಂಗವಾಗಿ ಮಾತನಾಡೋದಿಲ್ಲ. ವಯಸ್ಕರ ಚಿತ್ರಗಳಿಗೆ ಭಾರತದಲ್ಲಿ ಬ್ಲೂ ಫಿಲ್ಮ್ ಎಂದು ಕರೆಯಲಾಗುತ್ತದೆ. ಪೋರ್ನ್ ಚಿತ್ರಕ್ಕೆ ಬ್ಲೂ ಫಿಲ್ಮ್ ಎಂದು ಏಕೆ ಹೆಸರು ಬಂತು ಎನ್ನೋದು ನಿಮಗೆ ಗೊತ್ತಾ?

ಹಿಂದೆ ಭಾರತದಲ್ಲಿ ಪೋರ್ನ್ ಚಿತ್ರ ನಿರ್ಮಾಣದ ಬಜೆಟ್ ತುಂಬಾ ಕಡಿಮೆಯಿರುತ್ತಿತ್ತು. ಬ್ಲಾಕ್ ಅಂಡ್ ವೈಟ್ ನಲ್ಲಿ ಚಿತ್ರ ತೆಗೆದು ಕಡಿಮೆ ಖರ್ಚಿನಲ್ಲಿ ಅದನ್ನು ಬಣ್ಣಕ್ಕೆ ಪರಿವರ್ತಿಸುವ ಕೆಲಸ ನಡೆಯುತ್ತಿತ್ತು. ಚಿತ್ರದ ಮುದ್ರಣದಲ್ಲಿ ನೀಲಿ ಛಾಯೆ ಕಾಣಿಸುತ್ತಿತ್ತು. ಬಹುಶಃ ಈ ಕಾರಣಕ್ಕೆ ಪೋರ್ನ್ ಚಿತ್ರಗಳಿಗೆ ಬ್ಲೂ ಫಿಲ್ಮ್ ಎಂದು ಹೆಸರು ಬಂದಿರಬಹುದು.

ಬಿ ಗ್ರೇಡ್ ಚಿತ್ರಗಳನ್ನು ಪ್ರದರ್ಶಿಸುವ ಥಿಯೇಟರ್ ಗಳಲ್ಲಿ ನೀಲಿ ಬಣ್ಣದ ಪೋಸ್ಟರ್ ಹಾಕಲಾಗುತ್ತದೆ. ನೀಲಿ ಬಣ್ಣ ಜನರನ್ನು ಆಕರ್ಷಿಸುತ್ತದೆ ಎನ್ನುವ ಕಾರಣಕ್ಕೆ ನೀಲಿ ಬಣ್ಣದ ಪೋಸ್ಟರ್ ಹಾಕಲಾಗುತ್ತದೆ. ಬ್ಲೂ ಫಿಲ್ಮ್ ಎಂದು ಹೆಸರು ಬರಲು ಇದೂ ಕಾರಣವಿರಬಹುದು.

50-60 ವರ್ಷಗಳ ಹಿಂದೆ ಬ್ಲೂ ಕಾನೂನು ಜಾರಿಯಲ್ಲಿತ್ತು. ಅಂದ್ರೆ ಭಾನುವಾರ ಕೆಲ ವ್ಯವಹಾರ ನಡೆಸಲು ಅನುಮತಿಯಿರಲಿಲ್ಲ. ಬಿ ಗ್ರೇಡ್ ಚಿತ್ರಗಳನ್ನು ನೋಡಲೂ ಅನುಮತಿ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಬ್ಲೂ ಫಿಲ್ಮ್ ಎಂದು ಹೆಸರು ಬಂದಿರಬಹುದು.

ಪಿವಿಆರ್ ಗಳಲ್ಲಿ ವಿಡಿಯೋ ಕ್ಯಾಸೆಟ್ ಬಳಸಲಾಗ್ತಾಯಿತ್ತು. ಬಿ ಗ್ರೇಡ್ ವಿಡಿಯೋ ಯಾವುದು ಎಂಬುದು ಸುಲಭವಾಗಿ ತಿಳಿಯಲಿ ಎನ್ನುವ ಕಾರಣಕ್ಕೆ ಬಿ ಗ್ರೇಡ್ ಚಿತ್ರಗಳ ಕ್ಯಾಸೆಟ್ ಗಳಿಗೆ ನೀಲಿ ಬಣ್ಣ ಹಚ್ಚಲಾಗ್ತಿತ್ತು ಇದು ಮತ್ತೊಂದು ಕಾರಣವಿರಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...