alex Certify
ಕನ್ನಡ ದುನಿಯಾ       Mobile App
       

Kannada Duniya

ಬಜೆಟ್ ಮಂಡನೆಗೆ ಸಿದ್ಧವಾಗ್ತಿದೆ ಟೀಂ

2017_1image_14_13_541853057budget-11-ll

ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಬಜೆಟ್ ಮಂಡಿಸಲಿದೆ. ಬಜೆಟ್ ಗೆ ಕ್ಷಣಗಣನೆ ಶುರುವಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಇಡೀ ತಂಡ ಬಜೆಟ್ ತಯಾರಿಯಲ್ಲಿ ನಿರತವಾಗಿದೆ. ಈ ಬಾರಿ ಬಜೆಟ್ ನಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದೆಂದು ಹೇಳಲಾಗ್ತಾ ಇದೆ.

ಈ ಬಾರಿ ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡನೆಯಾಗೋದಿಲ್ಲ. ಸಂಸತ್ ನಲ್ಲಿ ಹಣಕಾಸು ಸಚಿವರು ಸಾಮಾನ್ಯ ಬಜೆಟ್ ಮಂಡನೆ ಮಾಡ್ತಾರೆ. ಆದ್ರೆ ಇದ್ರ ಹಿಂದೆ ಅನೇಕ ಅಧಿಕಾರಿಗಳ ಶ್ರಮವಡಗಿದೆ. ಪ್ರತಿ ವರ್ಷವೂ ಬಜೆಟ್ ತಯಾರಿಯಲ್ಲಿ ಹಣಕಾಸು ಅಧಿಕಾರಿಗಳು ಆರಂಭದಿಂದ ಕೊನೆಯವರೆಗೂ ಕೆಲಸ ಮಾಡ್ತಾರೆ. ಈ ಬಾರಿ ಕೂಡ ಅನೇಕರು ಬಜೆಟ್ ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ತಂಡದ ಕಮಾಂಡರ್. ವಿತ್ತಿ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಬಜೆಟ್ ತಂಡದಲ್ಲಿ ಅನುಭವಿಯಾಗಿದ್ದಾರೆ. ಬಜೆಟ್ ತಂಡದ ಪ್ರಮುಖ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ನೋಟು ನಿಷೇಧದ ನಂತ್ರ ದೇಶದ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಏನೆಲ್ಲ ಆರ್ಥಿಕ ಕ್ರಮಗಳನ್ನು ಕೈಗೊಳ್ಳಬಹುದೋ ಆ ಅಂಶಗಳನ್ನು ಬಜೆಟ್ ನಲ್ಲಿ ಜೋಡಿಸುವ ಕಾರ್ಯವನ್ನು ದಾಸ್ ಮಾಡಲಿದ್ದಾರೆ.

ಇನ್ನು ಕಂದಾಯ ಕಾರ್ಯದರ್ಶಿ ಹಸ್ಮುಕ್ ಅಧಿಯಾ, ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಾಸಾ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್, ಹಣಕಾಸು ಸೇವೆಗಳ ಕಾರ್ಯದರ್ಶಿ ಅಂಜಲಿ ದುಗ್ಗಲ್ ಬಜೆಟ್ ಟೀಂನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಹಣಕಾಸು ಸಚಿವಾಲಯದ ಜೊತೆಗೆ ಪಿಎಂಒ ಕೂಡ ಈ ಬಾರಿ ಬಜೆಟ್ ಮೇಲೆ ಸಾಕಷ್ಟು ಗಮನ ನೀಡಿದೆ. ಪ್ರತಿದಿನ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಸಭೆ ನಡೆಯುತ್ತಿದ್ದು, ಬಜೆಟ್ ಗೆ ಅಂತಿಮ ರೂಪ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...